ಬೆಂಗಳೂರು ಮಹಾಮಳೆಗೆ ಇದಂತೆ ಕಾರಣ; ವಿಜ್ಞಾನಿಗಳು ಹೇಳೋದೇನು ಗೊತ್ತಾ…..? 09-09-2022 6:42PM IST / No Comments / Posted In: Karnataka, Latest News, Live News ಐಟಿ-ಬಿಟಿ ಹಬ್ ಅನ್ನೇ ಮುಳುಗಿಸಿ ಭಾರಿ ಚರ್ಚೆಗೆ ಕಾರಣವಾದ ಮುಂಗಾರು ಮಳೆ ಸಿಲಿಕಾನ್ ಸಿಟಿಯಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಈ ವರ್ಷದಲ್ಲೇ ಸುರಿದ ಸಾರ್ವಕಾಲಿಕ ಮಳೆ ಎಂದು ಹವಮಾನ ಇಲಾಖೆ ಹೇಳುತ್ತಿದ್ದು, ಇನ್ನೆರಡು ತಿಂಗಳು ಬೆಂಗಳೂರಿನಲ್ಲಿ ಮಳೆ ಮುಂದುವರೆಯುವ ಆತಂಕ ವ್ಯಕ್ತಪಡಿಸಿದೆ. ಇದರ ಜೊತೆಗೆ ಈ ಮಳೆಗೆ ಕಾರಣ ಏನೂ ಎಂಬುದನ್ನೂ ವಿಜ್ಞಾನಿಗಳು ತಿಳಿಸಿದ್ದಾರೆ. ಹೌದು ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಹವಾಮಾನ ಬದಲಾವಣೆ ಕಾರಣ ಎಂದು ಹೇಳಲಾಗುತ್ತಿದೆ. ವಾತಾವರಣದಲ್ಲಿ ಕ್ಲೌಡ್ ಕಂಡೆನ್ಸೇಶನ್ ನ್ಯೂಕ್ಲಿಯಸ್ಗಳು ಕ್ರಮೇಣ ಹೆಚ್ಚಳವಾಗುತ್ತಿರುವುದು ಇದಕ್ಕೆ ಕಾರಣವಂತೆ ಇದರ ಜೊತೆಗೆ ಜಾಗತಿಕ ತಾಪಮಾನ ಏರಿಕೆಯೂ ಒಂದು ಕಾರಣ ಎಂದು ಹವಾಮಾನ ಮತ್ತು ಸಾಗರ ವಿಜ್ಞಾನಗಳ ಕೇಂದ್ರದ ಹವಾಮಾನಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ ಮತ್ತು ಹವಾಮಾನ ಬದಲಾವಣೆಯ ದಿವೇಚಾ ಸೆಂಟರ್ನ ಅಧ್ಯಕ್ಷ ಎಸ್.ಕೆ ಸತೀಶ್ ಹೇಳಿದ್ದಾರೆ. ಹೀಗೆ ಜಾಗತೀಕ ತಾಪಮಾನ ಏರಿಕೆಯಿಂದ ವಾತಾವರಣಕ್ಕೆ ಅಷ್ಟೆ ಅಲ್ಲದೆ ಮನುಷ್ಯನ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ. ಈ ರೀತಿಯ ಬದಲಾವಣೆಯಿಂದಾಗಿ ಜನರು ಉಸಿರಾಟದ ಮೇಲೂ ಪರಿಣಾಮ ಬೀರುತ್ತಿದೆಯಂತೆ. ಇದರಿಂದ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎನ್ನಲಾಗಿದೆ.