
ಭಾರತದಲ್ಲಿ ಹಲವು ಸವಾಲುಗಳಿವೆ, ಅವುಗಳನ್ನೆಲ್ಲ ಎದುರಿಸುತ್ತಿದ್ದೇವೆ ಎಂದಿರುವ ಮಸ್ಕ್, ಈ ವಿಚಾರವಾಗಿ ಯಾವುದೇ ಅಂತಿಮ ದಿನಾಂಕವನ್ನ ನೀಡಿಲ್ಲ. ಈ ಸಂದೇಶವನ್ನು ಅನುಸರಿಸಿ, ಭಾರತದ ಹಲವಾರು ರಾಜ್ಯ ಸರ್ಕಾರಗಳ ನಾಯಕರು ತಮ್ಮ ರಾಜ್ಯಗಳಲ್ಲಿ ಟೆಸ್ಲಾ ಕಂಪನಿ ತೆರೆಯಿರಿ ಎಂದು ಮಸ್ಕ್ ಗೆ ಆಹ್ವಾನ ನೀಡಿದ್ದಾರೆ. ಈ ಪಟ್ಟಿಗೆ ಈಗ ಕರ್ನಾಟಕ ರಾಜ್ಯವೂ ಸೇರಿಕೊಂಡಿದೆ.
ಎರಡೂ ಲಸಿಕೆ ಪಡೆದರೂ ಮೈಮರೆಯುವಂತಿಲ್ಲ; ಆಘಾತಕಾರಿ ವರದಿ ಬಹಿರಂಗ
ಹೌದು, ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಅವರು ಟ್ವೀಟ್‌ನಲ್ಲಿ ಟೆಸ್ಲಾ ಶಾಪ್ ಗಳನ್ನ ರಾಜಧಾನಿಯಲ್ಲಿ ತೆರೆಯಲು ಬಹಿರಂಗ ಆಹ್ವಾನ ನೀಡಿದ್ದಾರೆ. 400 ಕ್ಕೂ ಹೆಚ್ಚು R&D ಕೇಂದ್ರಗಳು, 45 ಕ್ಕಿಂತ ಹೆಚ್ಚು ಎಲೆಕ್ಟ್ರಾನಿಕ್ ವಾಹನಗಳ ಸ್ಟಾರ್ಟ್‌ಅಪ್‌ಗಳು ಮತ್ತು ಎಲೆಕ್ಟ್ರಾನಿಕ್ ವೆಹಿಕಲ್ ಕ್ಲಸ್ಟರ್ ಗಳಿರುವ ಕರ್ನಾಟಕವು ಭಾರತದ ಎಲೆಕ್ಟ್ರಾನಿಕ್ ವೆಹಿಕಲ್ ಗಳ ಹಬ್ ಆಗಿ ಹೊರಹೊಮ್ಮಿದೆ. ಕರ್ನಾಟಕವು ಟೆಸ್ಲಾ ಸ್ಥಾವರವನ್ನು ಸ್ಥಾಪಿಸಲು ಸೂಕ್ತ ತಾಣವಾಗಿದೆ. ಅಷ್ಟಕ್ಕೂ ಬೆಂಗಳೂರು ಈಗಾಗಲೇ ಭಾರತದಲ್ಲಿ ಟೆಸ್ಲಾದ ಮೊದಲ ಆಯ್ಕೆಯಾಗಿದೆ ಎಂದು ನಿರಾಣಿ ಟ್ವೀಟ್ ಮೂಲಕ ಎಲೋನ್ ಮಸ್ಕ್ ಗೆ ಸಂದೇಶ ನೀಡಿದ್ದಾರೆ.
ಈ ಮೊದಲು ತೆಲಂಗಾಣ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್ ಮತ್ತು ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯ ನಾಯಕರು, ಎಲೋನ್ ಮಸ್ಕ್ ಅವರನ್ನು ತಮ್ಮ ರಾಜ್ಯಗಳಲ್ಲಿ ಟೆಸ್ಲಾ ಸ್ಥಾವರ ಸ್ಥಾಪಿಸಲು ಆಹ್ವಾನಿಸಿದ್ದಾರೆ.