alex Certify ಬೆಂಗಳೂರಿನ ಆಸ್ಪತ್ರೆಯಲ್ಲಿ 7 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ವಿಧಿವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿನ ಆಸ್ಪತ್ರೆಯಲ್ಲಿ 7 ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ವಿಧಿವಶ

ಬೆಂಗಳೂರು: ಅತ್ಯಂತ ವಿರಳ ಪ್ರಕರಣ ಇದು. ಸುಮಾರು ಏಳು ವರ್ಷಗಳ ಕಾಲ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ಮಹಿಳೆ ಇತ್ತೀಚೆಗೆ ನಿಧನರಾದರು.

ಮೃತ ಮಹಿಳೆಯ ಹೆಸರು ಪೂನಂ ರಾಣಾ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರನ್ನು 2015ರ ಅಕ್ಟೋಬರ್‌ನಲ್ಲಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಸರಳ ಶಸ್ತ್ರಚಿಕಿತ್ಸೆ ಮಾಡಿಸಿದರೆ ಸಾಕು ಎಂದು ಭಾವಿಸಲಾಗಿತ್ತು. ಆದರೆ, ದಿನಕಳೆದಂತೆ ಪೂನಂ ಅವರ ಅನಾರೋಗ್ಯ ಸಂಕೀರ್ಣವಾಗಿತ್ತು. ಅನೇಕ ತೊಡಕುಗಳು ಕಂಡುಬಂದವು ಎಂದು ವೈದ್ಯರು ತಿಳಿಸಿದ್ದಾರೆ.

“ಪೂನಂ ರಾಣಾ ದೆಹಲಿ ಮೂಲದವರು. ಆಕ್ಸೆಂಚರ್‌ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಹಾಗೆ ಪರಿಚಯವಾಗಿ ನಾವು ವಿವಾಹವಾದೆವು. 2015ರಲ್ಲಿ ಪೂನಂಗೆ ಅನಾರೋಗ್ಯ ಕಾಡಿತ್ತು. ಅದೇ ವರ್ಷ ಸಮಸ್ಯೆ ಉಲ್ಭಣಿಸಿದ ಕಾರಣ ಅಕ್ಟೋಬರ್‌ನಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದೆವು. ಏಳು ವರ್ಷ ಚಿಕಿತ್ಸೆ ಪಡೆದರೂ ಪ್ರಯೋಜನಕಾರಿ ಆಗಲಿಲ್ಲ. ಮಂಗಳವಾರ (ಮೇ 24) ಆಕೆ ನಮ್ಮನ್ನು ಅಗಲಿದರು” ಎಂದು ಆಕೆಯ ಪತಿ ರೆಜಿಶ್ ನಾಯರ್ ಹೇಳಿದರು.

ದಂಪತಿಗೆ ಮಕ್ಕಳಿಲಿಲ್ಲ. ಈ ವಿರಳ ಪ್ರಕರಣ ಮುಂಬೈ ಆಸ್ಪತ್ರೆಯಲ್ಲಿ ಕೋಮಾವಸ್ಥೆಯಲ್ಲಿ 42 ವರ್ಷಗಳ ನರ್ಸ್ ಅರುಣಾ ಶಾನ್‌ಬಾಗ್ ಪ್ರಕರಣದ ನಂತರದ ದೀರ್ಘಾವಧಿ ಎಂದು ಹೇಳಲಾಗುತ್ತಿದೆ.

ಪೂನಂರನ್ನು 2015ರ ಅಕ್ಟೋಬರ್‌ 2ರಂದು ಎಂಐಸಿಯುಗೆ ದಾಖಲಿಸಲಾಗಿತ್ತು. ಅಂದಿನಿಂದ ಆಕೆ ಮೇ 24ರಂದು ನಿಧನರಾಗುವ ತನಕ ಉತ್ತಮ ರೀತಿಯ ಚಿಕಿತ್ಸೆಯನ್ನೇ ಒದಗಿಸಲಾಗಿದೆ. ಪೂನಂ ಚಿಕಿತ್ಸೆಗೆ 9.5 ಕೋಟಿ ರೂಪಾಯಿ ಬಿಲ್‌ ಆಗಿದೆ. ಇದರಲ್ಲಿ ಕುಟುಂಬದವರು 2 ಕೋಟಿ ರೂಪಾಯಿ ಪಾವತಿಸಿದ್ದಾರೆ ಎಂದು ಮಣಿಪಾಲ್‌ ಹಾಸ್ಪಿಟಲ್ಸ್‌ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...