
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಹಣಕಾಸು ವ್ಯವಹಾರದಲ್ಲಿ ಸ್ನೇಹಿತ ವಂಚನೆ ಮಾಡಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಕೊಂದ ಆರೋಪಿ, ಮೃತ ದೇಹದೊಂದಿಗೆ ಠಾಣೆಗೆ ಬಂದು ಶರಣಾಗಿದ್ದಾನೆ.
ಮಹೇಶಪ್ಪ ಕೊಲೆಯಾದ ವ್ಯಕ್ತಿಯಾಗಿದ್ದು, ಈತನನ್ನು ಸ್ನೇಹಿತ ರಾಜಶೇಖರ್ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಲೋನ್ ಕೊಡಿಸುವುದಾಗಿ ಹೇಳಿದ್ದ ಮಹೇಶಪ್ಪ, ರಾಜಶೇಖರ್ ನಿಂದ ಹಣ ಪಡೆದಿದ್ದ ಎನ್ನಲಾಗಿದ್ದು, ಅತ್ತ ಕೆಲಸವೂ ಮಾಡಿಕೊಡದೆ ಹಣ ಸಹ ಹಿಂದಿರುಗಿಸಿರಲಿಲ್ಲ ಎಂದು ಹೇಳಲಾಗಿದೆ.
ಇದರಿಂದ ಆಕ್ರೋಶಗೊಂಡಿದ್ದ ರಾಜಶೇಖರ್ ಮಾತುಕತೆಗೆಂದು ಮಹೇಶಪ್ಪನನ್ನು ಕರೆದಿದ್ದು, ಈ ವೇಳೆ ವಾಗ್ವಾದ ವಿಕೋಪಕ್ಕೆ ತಿರುಗಿ ರಾಜಶೇಖರ್ ರಾಡ್ ನಿಂದ ಹೊಡೆದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಹೇಶಪ್ಪ ಮೃತಪಟ್ಟಿದ್ದು, ಆತನ ಮೃತದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಬಂದ ರಾಜಶೇಖರ್ ರಾಮಮೂರ್ತಿ ನಗರ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.