ಬೆಂಗಳೂರಲ್ಲಿ ಮತ್ತೆ ಪೊಲೀಸ್ ತುಪಾಕಿ ಸದ್ದು ಮಾಡಿದೆ. ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ನಗರದ, ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನು ಕೆಜಿ ಹಳ್ಳಿ ನಿವಾಸಿ ಮಹಮ್ಮದ್ ಉಸ್ಮಾನ್ ಕೊಲೆಯಾದ ವ್ಯಕ್ತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೆನ್ನೆ ರಾತ್ರಿ 11 ಗಂಟೆ ಸಮಯದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ಮೋಹಿನ್ ಮತ್ತು ಉಸ್ಮಾನ್ ನಡುವೆ, ಹುಡುಗಿ ವಿಚಾರಕ್ಕೆ ಗಲಾಟೆ ನಡೆದಿತ್ತು. ತಾರಕ್ಕೇರಿದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಜಗಳ ನಡೆಯುತ್ತಿದ್ದ ಸ್ಥಳಕ್ಕೆ ತನ್ನ ಸ್ನೇಹಿತರನ್ನು ಕರೆಸಿಕೊಂಡ ಮೋಹೀನ್, ಮಹಮದ್ ಉಸ್ಮಾನ್ ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆ ಮಾಡಿ ಎಸ್ಕೇಪ್ ಆಗಿದ್ದವರು ಎಲ್ಲಿ ಅಡಗಿಕೊಂಡಿದ್ದಾರೆ ಎಂದು ಮಾಹಿತಿ ಪಡೆದಿದ್ದಾರೆ. ಮಾಹಿತಿ ಮೇರೆಗೆ ಕೊಲೆ ಆರೋಪಿಗಳು ಅಡಗಿಕೊಂಡಿದ್ದ ಸ್ಥಳಕ್ಕೆ ಬೆಳಗಿನ ಜಾವದಲ್ಲಿ ದಾಳಿ ನಡೆಸಿದ ಪೊಲೀಸರು, ಅರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಅವರು ತಮ್ಮ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಬೇಕಾಯಿತು ಎಂದು ಪೊಲೀಸ್ ಇಲಾಖೆ ತಿಳಸಿದೆ.
ಡ್ರಗ್ಸ್ ನಶೆಗೆ ಬಿದ್ದು ಗಾಂಜಾ ಮಾರಾಟಕ್ಕಿಳಿದ ಪ್ರೇಮಿಗಳು…!
ಅರೋಪಿಗಳನ್ನು ವಶಕ್ಕೆ ಪಡೆಯುವ ವೇಳೆ PSI ಗಳಾದ ರೂಮಾನ್ ಮತ್ತು ಆನಂದ್ ಮೇಲೆ, ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು PSI ರೂಮಾನ್ ಸೂಚಿಸಿದರೂ, ಆರೋಪಿಗಳು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಮುಖ್ಯ ಆರೋಪಿ ಸೈಯದ್ ಮೋಹೀನ್ ಮತ್ತು ಅದ್ನಾನ್ ಖಾನ್ ಕಾಲಿಗೆ ಶೂಟ್ ಮಾಡಬೇಕಾಯಿತು. ಸಧ್ಯ ಕೊಲೆ ಪ್ರಕರಣದ ಐವರು ಆರೋಪಿಗಳನ್ನು ಬಂಧಸಲಾಗಿದೆ. ಬೈಯಪ್ಪನಹಳ್ಳಿ ರಸ್ತೆಯ ಕಲ್ಲಪಲ್ಲಿ ಬಳಿ ಘಟನೆ ನಡೆದಿದೆ ಎಂದು ಪುಲಿಕೇಶಿನಗರದ ಪೊಲೀಸರು ಮಾಹಿತಿ ನೀಡಿದ್ದಾರೆ.