ನಟ ಸೃಜನ್ ಲೋಕೇಶ್ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ರೆಸ್ಟೋರೆಂಟ್ ಆರಂಭಿಸಿದ್ದಾರೆ. ಈಗಾಗಲೇ ಬೆಳ್ಳಂದೂರಿನಲ್ಲಿ ಅವರ ‘ಸೋಚಿ’ ಎಂಬ ರೆಸ್ಟೋರೆಂಟ್ ಇದ್ದು, ಈಗ ಕತ್ರಿಗುಪ್ಪೆ ಸರ್ಕಲ್ ಬಳಿ ‘ಕೋಕು’ ಕಿಚನ್ ಆರಂಭಿಸಿದ್ದಾರೆ.
ತಮ್ಮ ತಂದೆ ಲೋಕೇಶ್ ಅವರ ಹೆಸರಿನಲ್ಲಿ ಈ ರೆಸ್ಟೋರೆಂಟ್ ಅನ್ನು ಸೃಜನ್ ಲೋಕೇಶ್ ಆರಂಭಿಸಿದ್ದು, ಇದರ ಉದ್ಘಾಟನೆ ಸಂದರ್ಭದಲ್ಲಿ ಅವರ ತಾಯಿ ಗಿರಿಜಾ ಲೋಕೇಶ್, ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಪೂಜಾ ಲೋಕೇಶ್, ಗ್ರೀಷ್ಮಾ ಮೊದಲಾದವರು ಹಾಜರಿದ್ದರು.
ಶ್ರೀ ಕ್ಷೇತ್ರ ವಡನಬೈಲಿಗೆ ತೆರಳುವ ಭಕ್ತಾದಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ
ಇಂಡಿಯನ್, ಕಾಂಟಿನೆಂಟಲ್ ಸೇರಿ ಆರೋಗ್ಯಕರ ಆಹಾರ ದೊರಕುವ ಈ ರೆಸ್ಟೋರೆಂಟ್ ನಲ್ಲಿ ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಎಲ್ಲ ಹಿರಿಯರ ಫೋಟೋಗಳು ಇವೆ. ನಮ್ಮ ತಂದೆಯವರನ್ನು ಎಲ್ಲರೂ ಲೋಕು ಎಂದು ಕರೆಯುತ್ತಿದ್ದರು. ಮೊಮ್ಮಕ್ಕಳು ಕೋಕು ಎನ್ನುತ್ತಿದ್ದರು. ಹೀಗಾಗಿ ಇದಕ್ಕೆ ‘ಕೋಕು ಕಿಚನ್’ ಎಂಬ ಹೆಸರಿಟ್ಟಿರುವುದಾಗಿ ಸೃಜನ್ ಲೋಕೇಶ್ ತಿಳಿಸಿದ್ದಾರೆ.