ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ನಿಂತಿದ್ದ ಬೈಕ್ ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಫ್ಲೈಓವರ್ ಕೆಳಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಕ್ಕೂರು ಏರೋಡ್ರಮ್ ಬಳಿ ನಡೆದಿದೆ.
ಜಕ್ಕೂರು ಏರೋಡ್ರಮ್ ಬಳಿ ಮಗನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಸವಾರ, ಮಗನಿಗೆ ಏರೋಡ್ರಮ್ ತೋರಿಸುತ್ತಿದ್ದ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿಹೊಡೆದಿದೆ. ಕ್ಷಣಾರ್ಧದಲ್ಲಿ ಬೈಕ್ ಸವಾರ ಫೈಓವರ್ ಕೆಳಗೆ ಬಿದ್ದಿದ್ದು, ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಬೈಕ್ ನಲ್ಲಿದ್ದ 12 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೈಕ್ ಗೆ ಗುದ್ದಿರುವ ಕಾರಿನ ಚಾಲಕ ವರುಣ್ ನನ್ನು ಪೊಲೀಸರು ಕೆ.ಆರ್.ಪುರಂ ಬಳಿ ಬಂಧಿಸಿದ್ದಾರೆ.