
ನಾಳೆ ಹಾಗೂ ನಾಡಿದ್ದು ಬೆಂಗಳೂರಿನ ಕೆಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಡೆಟ್ ಮಾಹಿತಿ ನೀಡಿದೆ. ಬೆಸ್ಕಾಂನ್ನು ಮೇಲ್ದರ್ಜೆಗೆ ಏರಿಸುವ ಸೇರಿದಂತೆ ವಿವಿಧ ಕೆಲಸಗಳಿಗಾಗಿ ವಿದ್ಯುತ್ ಸೇವೆಯನ್ನು ವ್ಯತ್ಯಯಗೊಳಿಸಲಾಗುತ್ತದೆ.
ನಾಳೆ ಕೆಎಲ್‌ಇ ಕಾಲೇಜು ರಸ್ತೆ,, ಹೆಗ್ಗನಹಳ್ಳಿ ಕ್ರಾಸ್, ಈಸ್ಟ್ ವೆಸ್ಟ್ ಕಾಲೇಜು ರಸ್ತೆ, ವೃಷಭಾವತಿ ನಗರ, ಮಲ್ಲತ್ತಳ್ಳಿ ಲೇಔಟ್, ಎಚ್.ವಿ.ಆರ್. ಲೇಔಟ್, ಹೆಗ್ಗನಹಳ್ಳಿ ಕ್ರಾಸ್ ಸೇರಿದಂತೆ ವಿವಿಧೆಡೆಗಳಲ್ಲಿ ಬೆಳಗ್ಗೆ 10:30ರಿಂದ ಸಂಜೆ 5:30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇನ್ನು ಉದಯನಗರ, ಜೈ ಭೀಮ್ ನಗರ (ಜೆಬಿಎನ್) ಬಸ್ ನಿಲ್ದಾಣ, ಕೆಜಿ ಪುರ ಮುಖ್ಯರಸ್ತೆ ಹಾಗೂ ಕೋಡಿಹಳ್ಳಿ ಮುಖ್ಯರಸ್ತೆಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4:30ರವರೆಗೆ ಕರೆಂಟ್ ಇರುವುದಿಲ್ಲ.
ಬುಧವಾರದಂದು ವಿಘ್ನೇಶ್ವರ ನಗರ, ನಂದಗೋಕುಲ ಲೇಔಟ್, ಚಂದ್ರು ಲೇಔಟ್ ಹೆಗ್ಗನಹಳ್ಳಿ ಕ್ರಾಸ್, ವೃಷಭಾವತಿ ನಗರ, ಮಲ್ಲತ್ತಳ್ಳಿ ಬಡಾವಣೆ, ಪೂರ್ವ ಪಶ್ಚಿಮ ಕಾಲೇಜು ರಸ್ತೆ, ದೊಡ್ಡಮಂಗಲ, ನೀಲಾದ್ರಿ ರಸ್ತೆ, ಜೆಸಿ ಇಂಡಸ್ಟ್ರಿಯಲ್ ಲೇಔಟ್ ಹಾಗೂ ಶಾರದಾ ನಗರಗಳಲ್ಲಿ ವಿದ್ಯುತ್ ಸಮಸ್ಯೆ ಇರಲಿದೆ.