ಓವರ್ಹೆಡ್ ಟ್ರಾನ್ಸ್ಮಿಷನ್ ಲೈನ್ಗಳನ್ನು ಭೂಗತ ಕೇಬಲ್ಗಳಿಗೆ ಪರಿವರ್ತಿಸುವ ಸುಲವಾಗಿ ಬೆಸ್ಕಾಂ ಒಂದು ವಾರಗಳ ಕಾಲ ವೈಟ್ಫೀಲ್ಡ್ನ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪವರ್ ಕಟ್ ಮಾಡಲಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಇಲ್ಲಿನ ಜನರಿಗೆ ವಿದ್ಯುತ್ ವ್ಯತ್ಯಯ ಇರಲಿದೆ.
ಬೆಸ್ಕಾಂ ನೀಡಿರುವ ಮಾಹಿತಿಯ ಪ್ರಕಾರ, ಇಂದಿನಿಂದ ಗುರುವಾರದವರೆಗೆ ಈ ಭಾಗದ ಜನರು ಪವರ್ ಕಟ್ ಸಮಸ್ಯೆಯನ್ನು ಎದುರಿಸಲಿದ್ದಾರೆ. ಶನಿವಾರ ಹಾಗೂ ಭಾನುವಾರ ವೈಟ್ಫೀಲ್ಡ್ ಮುಖ್ಯ ರಸ್ತೆ, ಉಪಕಾರ್ ಲೇ ಔಟ್, ಬೋರ್ವೆಲ್ ರಸ್ತೆ, ಪ್ರಶಾಂತ್ ಲೇ ಔಟ್ ಸೇರಿದಂತೆ ವಿವಿಧೆಡೆಗಳಲ್ಲಿ ಪವರ್ ಕಟ್ ಇರಲಿದೆ.
ಸೋಮವಾರ ಹಾಗೂ ಮಂಗಳವಾರದಂದು ಕಚಮಾರಹಳ್ಳಿಯಲ್ಲಿ ಇಂಜಿನಿಯರ್ಗಳು ಕೆಲಸ ಮಾಡುವುದರಿಂದ ಬಳ್ಳಗೆರೆ ರಸ್ತೆ, ಹಲಸಳ್ಳಿ ರಸ್ತೆ, ಗುಂಜೂರು, ಕೃಪಾನಿಧಿ ಕಾಲೇಜು, ಹಲಸಳ್ಳಿ ಸೇರಿದಂತೆ ವಿವಿಧೆಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬುಧವಾರ ಹಾಗೂ ಗುರುವಾರದಂದು ಎಫ್ಸಿಐ ಗೋದಾಮು, ಚನ್ನಸಂದ್ರ, ಕೊರಲೂರು, ಸೌಖ್ಯ ರಸ್ತೆ ಸೇರಿದಂತೆ ವಿವಿಧೆಡೆ ವಿದ್ಯುತ್ ಕಡಿತವಾಗಲಿದೆ.