ಮದುವೆಗಳಲ್ಲಿ ಬೇರೆ ಬೇರೆ ಸಂಪ್ರದಾಯ ನೃತ್ಯಗಳು ನಡೆಯುವುದುಂಟು, ಆದರೆ ಬೆಂಕಿಯ ಮಧ್ಯದಲ್ಲಿ ವಧು – ವರರು ನೃತ್ಯ ಮಾಡುವುದನ್ನು ನೀವು ನೋಡಿದ್ದೀರಾ ?
ಇದೀಗ ಕ್ರಿಶ್ಚಿಯನ್ ಸಂಪ್ರದಾಯದ ಮದುವೆಯ ವೀಡಿಯೊ ವೈರಲ್ ಆಗುತ್ತಿದೆ, ಅಲ್ಲಿ ವಧು ಸುಂದರವಾದ ಬಿಳಿ ಡ್ರೆಸ್ ಧರಿಸಿ ಮತ್ತು ಕಪ್ಪು ಸೂಟ್ ಧರಿಸಿದ ವರನ ಜೊತೆ ಡ್ಯಾನ್ಸ್ ಮಾಡುವುದನ್ನು ನೋಡಬಹುದು.
ಅತಿಥಿಗಳ ಸಮ್ಮುಖ ನಿಂತು ಪ್ರತಿಜ್ಞೆ ವಿನಿಮಯದ ನಂತರ ಕ್ಯೂಟ್ ದಂಪತಿಗಳು ತಮ್ಮ ಮೊದಲ ನೃತ್ಯವನ್ನು ಎದುರು ನೋಡುತ್ತಿದ್ದಂತೆ, ಇಬ್ಬರು ಕೆಲವು ರೀತಿಯ ಪರಿಕರಗಳೊಂದಿಗೆ ಪ್ರವೇಶಿಸುತ್ತಾರೆ. ಹಾರ್ಟ್ ರೂಪದಲ್ಲಿ ಸ್ಪ್ರೇ ಮಾಡುತ್ತಾರೆ ಒಬ್ಬ ವ್ಯಕ್ತಿ ನಂತರ ಲೈಟರ್ನೊಂದಿಗೆ ಬೆಂಕಿಯನ್ನು ಬೆಳಗಿಸುತ್ತಾನೆ.
ದಂಪತಿಗಳ ಸುತ್ತಲೂ ಬೆಂಕಿಯ ಅದ್ಭುತ ಹಾರ್ಟ್ ಶೇಪ್ ರೂಪಿತವಾಗುತ್ತದೆ. ಅವರು ಬೆಂಕಿಯ ಮಧ್ಯದಲ್ಲಿ ಲೋಕ ಮರೆತು ನೃತ್ಯ ಮಾಡುತ್ತಾರೆ. ಸುತ್ತ ಇದ್ದವರೆಲ್ಲ ಚಪ್ಪಾಳೆ ತಟ್ಟಿ ಖುಷಿಪಡುತ್ತಾರೆ.
ಈ ವಿಡಿಯೋ 8.5 ಮಿಲಿಯನ್ ವೀಕ್ಷಣೆಗಳು ಮತ್ತು 53 ಸಾವಿರ ಲೈಕ್ಗಳೊಂದಿಗೆ ವೈರಲ್ ಆಗಿದೆ. ನೆಟ್ಟಿಗರು ಇದನ್ನು ಕಂಡು ಮಂತ್ರಮುಗ್ಧರಾಗಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಎಚ್ಚರಿಕೆ ಮಾತನ್ನಾಡಿದ್ದಾರೆ.
https://youtu.be/YKHgDmjJJhg