ಬೃಹತ್ ಮೊಸಾಯಿಕ್ ಅನ್ನು ತಯಾರಿಸುವ ಮೂಲಕ ಅಮೆರಿಕಾದಲ್ಲಿನ ಗ್ರೋಸರಿ ಸ್ಟೋರ್ (ಕಿರಾಣಿ ಅಂಗಡಿ) ಗಿನ್ನಿಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ. 14,400 ಡೊನಟ್ಸ್ ಮತ್ತು 48,160 ಔನ್ಸ್ (ಅಂದಾಜು 1365 ಕಿಲೋಗ್ರಾಂ) ತೂಕದ ಮೊಸಾಯಿಕ್ ತಯಾರಿಸಲಾಗಿದೆ.
ಹೌದು, ಅಮೆರಿಕಾದ ಬಾಶಾಸ್ ಎಂಬ ಸಂಸ್ಥೆಯು ತನ್ನ 90ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ, ವಿಭಿನ್ನವಾಗಿ ಆಚರಿಸಲು ನಿರ್ಧರಿಸಿತು. ಈ ವೇಳೆ ಯಾಕೆ ಗಿನ್ನಿಸ್ ವಿಶ್ವದಾಖಲೆಯಂತ ಸಾಧನೆಗೆ ತಮ್ಮ ಸಂಸ್ಥೆ ಪಾತ್ರವಾಗಬಾರದು ಎಂಬ ಆಲೋಚನೆ ಹೊಳೆಯಿತು. ಹೀಗಾಗಿ ಡೋನಟ್ಸ್ ಮೂಲಕ ಬೃಹತ್ ಮೊಸಾಯಿಕ್ ತಯಾರಿಸಿ ವಿಶ್ವದಾಖಲೆಗೆ ಪಾತ್ರವಾಗಿದೆ.
ಸಂಸ್ಥೆಯು ತನ್ನ ಲೋಗೋದ ಆಕಾರದಲ್ಲಿ ವಿಶ್ವದ ಅತಿದೊಡ್ಡ ಮೊಸಾಯಿಕ್ ಅನ್ನು 902 ಚದರ ಅಡಿ ವಿಸ್ತೀರ್ಣದಲ್ಲಿ ಸಿದ್ಧಪಡಿಸಿದೆ. ಈ ಮೂಲಕ ಈ ಹಿಂದೆ ಉಕ್ರೇನ್ ನಲ್ಲಿ 512 ಚದರ ಅಡಿ ಪ್ರದೇಶದಲ್ಲಿ ಹರಡಿರುವ 7,040 ಡೋನಟ್‌ಗಳನ್ನು ಒಳಗೊಂಡಿದ್ದ ದಾಖಲೆಯನ್ನು ಮುರಿಯಲಾಗಿದೆ.