ಹಾವುಗಳ ಹೆಸರು ಕೇಳಿದ್ರೇನೆ ಎಲ್ಲರಿಗೂ ಭಯ. ಅದರಲ್ಲೂ ಕೆಲವೊಂದು ವೈರಲ್ ವಿಡಿಯೋಗಳಂತೂ ನಡುಕ ಹುಟ್ಟಿಸುತ್ತವೆ. ಅಂಥದ್ರಲ್ಲಿ ವ್ಯಕ್ತಿಯೊಬ್ಬ ಕಾಲಿಗೆ ನಾಗರಹಾವನ್ನೇ ಧರಿಸಿ ಬಂದರೆ ಹೇಗಿರಬಹುದು ಹೇಳಿ?
ಅಂತಹ ವಿಡಿಯೋ ಒಂದು ಈಗ ಇಂಟರ್ನೆಟ್‌ನಲ್ಲಿ ಹರಿದಾಡ್ತಿದೆ. ವ್ಯಕ್ತಿಯೊಬ್ಬ ಥೇಟ್ ನಾಗರಹಾವಿನಂತೆಯೇ ಇರುವ ಬೂಟುಗಳನ್ನು ಧರಿಸಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾನೆ.
ಆತ ನಡೆದುಕೊಂಡು ಬರ್ತಾ ಇದ್ರೆ ಎರಡು ಹಾವುಗಳು ಹೆಡೆ ಎತ್ತಿಕೊಂಡು ನಮ್ಮ ಕಡೆಗೇ ಬರುತ್ತಿರುವಂತೆ ಭಾಸವಾಗುತ್ತದೆ. ಈ ವೀಡಿಯೊವನ್ನು Twitterನಲ್ಲಿ ಹರಿದಾಡ್ತಾ ಇದೆ. ವಿದೇಶದಲ್ಲಿ ಇದನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗ್ತಿದೆ. ಆದರೆ ಆತ ಯಾರು ಅನ್ನೋದು ಖಚಿತವಾಗಿಲ್ಲ.
ಬೂಟಿನ ಮುಂಭಾಗದಲ್ಲಿ ಹಾವು ಹೆಡೆಬಿಚ್ಚಿ ನಿಂತಿರುವಂತೆ ವಿನ್ಯಾಸಗೊಳಿಸಲಾಗಿದೆ. ಈ ಶೂಗಳನ್ನು ಧರಿಸಿದ ವ್ಯಕ್ತಿ ರಸ್ತೆ ಬದಿಯಲ್ಲಿ ನಿಂತಿದ್ದ, ದೂರದಿಂದ ನೋಡಿದರೆ ಎರಡು ನೈಜ ಹಾವುಗಳೇ ನಿಂತಂತೆ ಕಾಣಿಸುತ್ತಿದೆ. ಈ ವೀಡಿಯೊವನ್ನು ಶೂಗಳ ಸಮೀಪದಿಂದ ಚಿತ್ರೀಕರಿಸಿದ್ದು, ವೀಕ್ಷಿಸಲು ತುಂಬಾ ಭಯಾನಕವಾಗಿದೆ.
https://twitter.com/ViralPosts5/status/1622868098188742657?ref_src=twsrc%5Etfw%7Ctwcamp%5Etweetembed%7Ctwterm%5E1622868098188742657%7Ctwgr%5E2a9df29fce2cbf339d78c28b1cc42507dd82623f%7Ctwcon%5Es1_&ref_url=https%3A%2F%2Fzeenews.india.com%2Fhindi%2Foff-beat%2Fking-cobra-shoes-wear-by-man-public-shoched-and-terrified-with-the-snake-hood%2F1564335