ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಓಲಾ, ಓಕಿನಾವಾ ಸೇರಿದಂತೆ ಅನೇಕ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ಗಳು ಹಾಟ್ ಕೇಕ್ ನಂತೆ ಮಾರಾಟವಾಗುತ್ತಿವೆ. ಇದರ ಜೊತೆಜೊತೆಗೆ ಎಲೆಕ್ಟ್ರಿಕ್ ಬೈಕ್ಗಳು ಕೂಡ ಮಾರುಕಟ್ಟೆಯಲ್ಲಿ ಸದ್ದು ಮಾಡ್ತಾ ಇವೆ. ಆದ್ರೆ ಸ್ಪ್ಲೆಂಡರ್ ಮತ್ತು ರಾಯಲ್ ಎನ್ಫೀಲ್ಡ್ ಬುಲೆಟ್ನಂತಹ ಬೈಕ್ಗಳ ಎಲೆಕ್ಟ್ರಿಕ್ ಬೈಕ್ಗಳಿಗಾಗಿ ಜನರು ಕಾಯುತ್ತಿದ್ದಾರೆ.
ಬಿಹಾರದ ಕಂಪನಿಯೊಂದು ಬುಲೆಟ್ನಂಥದ್ದೇ ಎಲೆಕ್ಟ್ರಿಕ್ ಆವೃತ್ತಿಗಳನ್ನು ತಯಾರಿಸಿ ತನ್ನ ವೆಬ್ಸೈಟ್ನಲ್ಲಿ ಮಾರಾಟ ಮಾಡುತ್ತಿದೆ. ಈ ವೆಬ್ಸೈಟ್ನಲ್ಲಿ ಎಲೆಕ್ಟ್ರಿಕ್ ಬೈಕ್ಗಳು ಮತ್ತು ಸ್ಕೂಟರ್ಗಳ ಹಲವು ಆಯ್ಕೆಗಳಿವೆ. ಇಲ್ಲಿ ನೀವು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಅನ್ನು ಸಹ ಖರೀದಿಸಬಹುದು. ಸಿಲ್ವೆಲೈನ್ ಹೆಸರಿನ ಈ ಕಂಪನಿ ರಾಯಲ್ ಎನ್ಫೀಲ್ಡ್ ಬುಲೆಟ್ನಂತೆ ಕಾಣುವ ಎಲೆಕ್ಟ್ರಿಕ್ ಬೈಕ್ಗಳನ್ನು ಮಾರಾಟ ಮಾಡುತ್ತಿದೆ. ಅದಕ್ಕೆ ಲವ್ ಪ್ಲಸ್ ಎಂದು ಹೆಸರಿಡಲಾಗಿದೆ.
ವಿಶೇಷವೆಂದರೆ ಕೇವಲ 2000 ರೂಪಾಯಿಗೆ ಈ ಬೈಕ್ ಅನ್ನು ಬುಕ್ ಮಾಡಬಹುದು. ಈ ಬೈಕಿನ ಗರಿಷ್ಠ ವೇಗ ಗಂಟೆಗೆ 120 ಕಿಲೋಮೀಟರ್. ಕಂಪನಿಯ ಪ್ರಕಾರ ಇದು ಸಂಪೂರ್ಣ ಚಾರ್ಜ್ನಲ್ಲಿ 150 ಕಿಮೀವರೆಗೆ ಓಡಬಹುದು. ಬೈಕಿನ ಬೆಲೆ 1,51,999 ರೂಪಾಯಿ. ಹೀರೋ ಕಂಪನಿಯ ಜನಪ್ರಿಯ ಬೈಕ್ ಪ್ಯಾಶನ್ ಪ್ರೊ ಎಲೆಕ್ಟ್ರಿಕ್ ಆವೃತ್ತಿಯೂ ಲಭ್ಯವಿದೆ. ಅದಕ್ಕೆ ಅಗ್ನಿ ಪ್ಲಸ್ ಎಂದು ಹೆಸರಿಡಲಾಗಿದೆ.
ಈ ಬೈಕಿನ ಬೆಲೆ 1,25,999 ರೂಪಾಯಿ. ಇದನ್ನು ಕೂಡ ಕೇವಲ 2000 ರೂಪಾಯಿ ಪಾವತಿಸಿ ಬುಕ್ ಮಾಡಬಹುದು. ಈ ಬೈಕ್ನ ಗರಿಷ್ಠ ವೇಗ ಗಂಟೆಗೆ 90 ಕಿಲೋಮೀಟರ್. ಕಂಪನಿಯ ಪ್ರಕಾರ ಇದು ಸಂಪೂರ್ಣ ಚಾರ್ಜ್ನಲ್ಲಿ 150 ಕಿಮೀ ವರೆಗೆ ಓಡಬಹುದು. ಕೇವಲ ಬುಲೆಟ್ ಮತ್ತು ಪ್ಯಾಶನ್ ಪ್ರೊ ಮಾತ್ರವಲ್ಲ, ಯಮಹಾ R15 ಅನ್ನು ರೀತಿಯಲ್ಲೇ ಕಾಣುವ ಎಲೆಕ್ಟ್ರಿಕ್ ಆವೃತ್ತಿಯ ಮೋಟಾರ್ ಸೈಕಲ್ ಕೂಡ ಇಲ್ಲಿ ಲಭ್ಯವುದೆ. ಇದಲ್ಲದೆ ಎಲೆಕ್ಟ್ರಿಕ್ ಆಟೋಗಳು ಮತ್ತು ಇ-ರಿಕ್ಷಾಗಳೂ ಇವೆ.