ಪ್ರತಿದಿನ ಮನೆಯಲ್ಲಿ ಪೊರಕೆಯಿಂದ ಕಸ ಗುಡಿಸುತ್ತೇವೆ. ಹಿಂದೂಧರ್ಮದಲ್ಲಿ ಪೊರಕೆ ಲಕ್ಷ್ಮಿ ಸಮಾನ ಎಂಬ ನಂಬಿಕೆ ಇದೆ. ಹಾಗಾಗಿ ಪೊರಕೆಯನ್ನು ಈ ರೀತಿಯಾಗಿ ಬಳಸಿದರೆ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದು ಎಂದು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಅದು ಏನು ಎಂಬುದನ್ನು ತಿಳಿದುಕೊಳ್ಳಿ.
ಮಂಗಳವಾರ, ಶುಕ್ರವಾರ, ಗ್ರಹಣದ ದಿನ, ಸಂಕ್ರಮಣದ ದಿನದಂದು ಹೊಸ ಪೊರಕೆಯನ್ನು ಮನೆಗೆ ತರಬಾರದು. ಇದರಿಂದ ಕಷ್ಟಗಳು ಹೆಚ್ಚಾಗುತ್ತದೆ. ಹಾಗೇ ಹಳೆಯ ಪೊರಕೆಯನ್ನು ಮಂಗಳವಾರ, ಶುಕ್ರವಾರ, ಏಕಾದಶಿ ಹಾಗೂ ಶನಿವಾರದಂದು ಮನೆಯಿಂದ ಹೊರಗೆ ಎಸೆಯಬಾರದು. ಇದರಿಂದ ಲಕ್ಷ್ಮಿ ಕೋಪಗೊಳ್ಳುತ್ತಾಳೆ.
ಹಾಗೇ ಬುಧವಾರದಂದು ಮಧ್ಯಾಹ್ನ 12 ಗಂಟೆಯಿಂದ 12.30ರೊಳಗೆ ಪೊರಕೆಯನ್ನು ಸ್ವಚ್ಛಗೊಳಿಸಬೇಕು. ಯಾಕೆಂದರೆ ಉಳಿದಂತ ದಿನಗಳಲ್ಲಿ ಈ ಸಮಯದಲ್ಲಿ ಅಭಿಜಿತ್ ಮುಹೂರ್ತವಿರುತ್ತದೆ. ಅಂದು ಪೊರಕೆ ಸ್ವಚ್ಛ ಮಾಡಬಾರದು. ಆದರೆ ಬುಧವಾರದಂದು ಮಾತ್ರ ಈ ಸಮಯದಲ್ಲಿ ಅಭಿಜಿತ್ ಮುಹೂರ್ತ ಇರುವುದಿಲ್ಲ. ಇದರಿಂದ ಮನೆಯಲ್ಲಿ ಆರ್ಥಿಕ ಅಭಿವೃದ್ದಿಗೊಳ್ಳುತ್ತದೆ.