alex Certify ಬುದ್ಧಿವಂತಿಕೆಗೂ ರಕ್ತದ ಗುಂಪಿಗೂ ಇದೆ ಅವಿನಾಭಾವ ಸಂಬಂಧ; ಅತ್ಯಂತ ಚುರುಕಾಗಿರುತ್ತಾರೆ ಈ ಬ್ಲಡ್‌ ಗ್ರೂಪ್‌ ಹೊಂದಿರುವವರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುದ್ಧಿವಂತಿಕೆಗೂ ರಕ್ತದ ಗುಂಪಿಗೂ ಇದೆ ಅವಿನಾಭಾವ ಸಂಬಂಧ; ಅತ್ಯಂತ ಚುರುಕಾಗಿರುತ್ತಾರೆ ಈ ಬ್ಲಡ್‌ ಗ್ರೂಪ್‌ ಹೊಂದಿರುವವರು…..!

ರಕ್ತದಲ್ಲಿ ಪ್ರಮುಖವಾಗಿ ನಾಲ್ಕು ಗುಂಪುಗಳಿವೆ. A, B, AB ಮತ್ತು O ಎಂದು 4 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ರಕ್ತದ ಗುಂಪುಗಳನ್ನು ಧನಾತ್ಮಕ ಮತ್ತು ಋಣಾತ್ಮಕವಾಗಿ ವಿಂಗಡಿಸಲಾಗಿದೆ. ಕೆಲವರ ಬುದ್ಧಿ ಚುರುಕಾಗಿದೆ, ಅವರು ತುಂಬಾ ಬುದ್ಧಿವಂತರು ಎಂದು ಜನರು ಹೇಳುವುದನ್ನು ನೀವು ಆಗಾಗ್ಗೆ ಕೇಳಿರಬಹುದು. ಈ ಬುದ್ಧಿವಂತಿಕೆಯಲ್ಲಿ ರಕ್ತದ ಗುಂಪು ದೊಡ್ಡ ಪಾತ್ರವನ್ನು ಹೊಂದಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯಲ್ಲಿ, ಯಾವ ರಕ್ತದ ಗುಂಪಿನ ಜನರು ತೀಕ್ಷ್ಣವಾದ ಮನಸ್ಸನ್ನು ಹೊಂದಿರುತ್ತಾರೆ ಎಂಬುದನ್ನು ಬಹಿರಂಗಪಡಿಸಲಾಗಿದೆ. ರಕ್ತದ ಗುಂಪಿಗೆ ಅನುಗುಣವಾಗಿ ದೇಹದ ವಿನ್ಯಾಸವು ಭಿನ್ನವಾಗಿರುತ್ತದೆ ಮತ್ತು ಅದರ ಪರಿಣಾಮವು ದೇಹದ ಭಾಗಗಳ ಮೇಲೂ ಆಗುತ್ತದೆ.

ರಕ್ತದ ಗುಂಪು ಎಂದರೇನು ?

ರಕ್ತದ ಗುಂಪು ಮೂಲಭೂತವಾಗಿ ಪ್ರತಿಜನಕಗಳು ಮತ್ತು ಪ್ರತಿಕಾಯಗಳ ಮೇಲೆ ಅವಲಂಬಿತವಾಗಿದೆ. ಇದು ಪ್ರೋಟೀನ್ ಅಣುಗಳ ಒಂದು ವಿಧವಾಗಿದೆ. ಪ್ಲಾಸ್ಮಾದಲ್ಲಿ ಪ್ರತಿಕಾಯಗಳು ಇರುತ್ತವೆ ಮತ್ತು ಕೆಂಪು ರಕ್ತ ಕಣಗಳ ಮೇಲ್ಮೈಯಲ್ಲಿ ಪ್ರತಿಜನಕಗಳು ಇರುತ್ತವೆ. ಇವೆರಡೂ ಸೇರಿ ರಕ್ತದ ಪ್ರಕಾರವನ್ನು ನಿರ್ಧರಿಸುತ್ತವೆ.

B+ ರಕ್ತದ ಗುಂಪಿನವರ ಮೆದುಳು ಬಹಳ ಚುರುಕಾಗಿರುತ್ತದೆ…

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಈ ಸಂಶೋಧನೆಯಲ್ಲಿ, B+ ರಕ್ತದ ಗುಂಪಿನ ಜನರ ಮೆದುಳು ಇತರ ಗುಂಪುಗಳಿಗಿಂತ ಚುರುಕಾಗಿರುವುದು ದೃಢಪಟ್ಟಿದೆ.ಅವರು ಹೆಚ್ಚು ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. B+ ರಕ್ತದ ಗುಂಪನ್ನು ಹೊಂದಿರುವವರು ತಮ್ಮ ಮೆದುಳಿನಲ್ಲಿ ಪೆರಿಟೋನಿಯಲ್ ಮತ್ತು ಟೆಂಪೋರಲ್ ಲೋಬ್‌ನ ಹೆಚ್ಚು ಸಕ್ರಿಯ ಸೆರೆಬ್ರಮ್ ಅನ್ನು ಹೊಂದಿರುತ್ತಾರೆ, ಇದರಿಂದಾಗಿ ಅವರ ಸ್ಮರಣೆ ಮತ್ತು ಮೆದುಳು ಎರಡೂ ತೀಕ್ಷ್ಣವಾಗಿರುತ್ತವೆ.

ಎರಡನೇ ಸ್ಥಾನದಲ್ಲಿದೆ O+ ರಕ್ತದ ಗುಂಪು

O+ ರಕ್ತದ ಗುಂಪು ಹೊಂದಿರುವವರ ಬುದ್ಧಿ ಕೂಡ ಬಹಳ ತೀಕ್ಷ್ಣವಾಗಿರುತ್ತದೆ. ಅವರ ರಕ್ತ ಪರಿಚಲನೆಯು ಇತರ ಗುಂಪುಗಳಿಗಿಂತ ಉತ್ತಮವಾಗಿದೆ. ಇದರಿಂದಾಗಿ ಮೆದುಳಿನಲ್ಲಿ ಆಮ್ಲಜನಕದ ಹರಿವು ಸಹ ಉತ್ತಮವಾಗಿರುತ್ತದೆ. O ಪಾಸಿಟಿವ್‌ ರಕ್ತದ ಗುಂಪಿನವರ ಮೆದುಳಿನಲ್ಲಿ ಸೆರೆಬ್ರಮ್ ಹೆಚ್ಚು ಸಕ್ರಿಯವಾಗಿರುತ್ತದೆ, ಇದರಿಂದಾಗಿ ಅವರು ಉತ್ತಮ ನೆನಪಿನ ಶಕ್ತಿಯನ್ನು ಹೊಂದಿರುತ್ತಾರೆ.

ಸಂಶೋಧನೆ ಏನು ಹೇಳುತ್ತದೆ ?

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯಲ್ಲಿ ಪ್ರತಿ ಗುಂಪಿನ 69 ಜನರನ್ನು ಅಧ್ಯಯನ ಮಾಡಲಾಯಿತು. ಅವರ ರಕ್ತದ ಮಾದರಿಗಳ ಮೇಲೆ ಸಂಶೋಧನೆ ನಡೆಸಲಾಯಿತು. ಈ ಸಂಶೋಧನೆಯಲ್ಲಿ ಪ್ರತಿ ಗುಂಪಿನ ಜನರ ಮೆದುಳಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ಬಿ + ಮತ್ತು ಒ+ ಜನರ ಮೆದುಳು ಉಳಿದ ಗುಂಪುಗಳಿಗಿಂತ ಹೆಚ್ಚು ಚುರುಕಾಗಿರುವುದು ದೃಢಪಟ್ಟಿದೆ.  

ರಕ್ತದ ಗುಂಪು ಮತ್ತು ಜೆನೆಟಿಕ್ ನಡುವಣ ಸಂಬಂಧ

ಮಗುವಿನ ರಕ್ತದ ಗುಂಪು ಪೋಷಕರ ರಕ್ತದ ಗುಂಪನ್ನು ಅವಲಂಬಿಸಿರುತ್ತದೆ. ಪೋಷಕರ ರಕ್ತದ ಗುಂಪು ಎ ಮತ್ತು ಬಿ ಆಗಿದ್ದರೆ, ಮಗುವಿನ ರಕ್ತದ ಗುಂಪು ಎ, ಬಿ ಅಥವಾ ಎಬಿ ಆಗಿರಬಹುದು. ಅದೇ ರೀತಿ ರಕ್ತದ ಗುಂಪು A ಮತ್ತು O ಆಗಿದ್ದರೆ, ಮಗುವೂ A ಅಥವಾ O ರಕ್ತದ ಗುಂಪಿನದ್ದಾಗಿರುತ್ತದೆ.

ಯಾರು ರಕ್ತದಾನ ಮಾಡಬಹುದು ?

ಅನೇಕ ಜನರಿಗೆ ರಕ್ತದ ಅಗತ್ಯವಿರುತ್ತದೆ. ಅಂತಹ ಸಂದರ್ಭದಲ್ಲಿ ಎಲ್ಲರೂ ರಕ್ತದಾನ ಮಾಡುವುದು ಅಸಾಧ್ಯ. O ರಕ್ತದ ಗುಂಪಿನವರನ್ನು ಸಾರ್ವತ್ರಿಕ ದಾನಿಗಳೆಂದು ಕರೆಯಲಾಗುತ್ತದೆ.  ಆದರೆ ಈಗ ಪ್ರತಿಯೊಂದು ಗುಂಪಿನ ಜನರು ರಕ್ತದಾನ ಮಾಡಬಹುದು. ರಕ್ತದಾನ ಮಾಡುವಾಗ ಕೆಲವು ಅಂಶಗಳನ್ನು ಗಮನಿಸಬೇಕು-ನೀವು ತುಂಬಾ ಆರೋಗ್ಯಕರ ಮತ್ತು ಫಿಟ್ ಆಗಿರಬೇಕು.  ನಿಮಗೆ ಯಾವುದೇ ರೀತಿಯ ಕಾಯಿಲೆ ಇರಬಾರದು.ನಿಮ್ಮ ತೂಕ 50 ಕೆಜಿಯಿಂದ 158 ಕೆಜಿವರೆಗೆ ಇರಬೇಕು. ನಿಮ್ಮ ವಯಸ್ಸು 17 ವರ್ಷದಿಂದ 65 ವರ್ಷದೊಳಗಿರದ್ದರೆ ಮಾತ್ರ ರಕ್ತದಾನ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...