ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳೋದು ಅತ್ಯಂತ ಅವಶ್ಯಕ. ಮನುಷ್ಯರಿಗಂತೂ ಇದಕ್ಕಾಗಿ ಹತ್ತಾರು ವಿಧಾನಗಳಿಗೆ. ಬ್ರಶ್ ಮಾಡಬಹುದು, ನಿಯಮಿತವಾಗಿ ಚೆಕಪ್ ಮಾಡಿಸಿಕೊಳ್ಳುವ ಮೂಲಕ ಹಲ್ಲುಗಳನ್ನು ಗಟ್ಟಿಯಾಗಿ, ಸ್ವಚ್ಛವಾಗಿ ಇಟ್ಟುಕೊಳ್ಳಬಹುದು.
ಆದ್ರೆ ಇಷ್ಟೆಲ್ಲಾ ಸೌಲಭ್ಯವಿದ್ರೂ ನಾವು ಹಲ್ಲುಗಳ ಶುಚಿತ್ವದ ಬಗ್ಗೆ ಗಮನ ಕೊಡುತ್ತಿಲ್ಲ. ಜನರಿಗೆ ಹೋಲಿಸಿದ್ರೆ ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳುವಲ್ಲಿ ಭಾರತದ ಕೋತಿಗಳೇ ಮುಂದಿದೆಯಂತೆ. ಸಂಶೋಧನೆಯೊಂದರಲ್ಲಿ ಈ ಅಂಶ ಬಯಲಾಗಿತ್ತು.
ಭಾರತದಲ್ಲಿರುವ ಉದ್ದ ಬಾಲದ ಮಂಗಗಳು ನೈಲಾನ್ ದಾರ, ಹಕ್ಕಿಗಳ ರೆಕ್ಕೆ, ತೆಂಗಿನ ಕಾಯಿ ಚರಟ, ಹುಲ್ಲಿನ ಕಡ್ಡಿಯನ್ನೆಲ್ಲ ಬಳಸಿ ಹಲ್ಲುಗಳನ್ನು ಕ್ಲೀನ್ ಮಾಡಿಕೊಳ್ಳುತ್ತವೆ. ಈ ಕೆಲಸವನ್ನು ನಿಯಮಿತವಾಗಿ ಮಾಡುವುದರಿಂದ ವಿದೇಶೀಯರ ಹಲ್ಲುಗಳಿಗಿಂತ್ಲೂ ಭಾರತದ ಕೋತಿಗಳ ಹಲ್ಲು ಹೆಚ್ಚು ಶುಚಿಯಾಗಿದೆಯಂತೆ.
ಭಾರತದ ಮಂಗಗಳ ಬುದ್ಧಿವಂತಿಕೆಗೆ ಜಗತ್ತೇ ಬೆರಗಾಗಿದೆ. ಕಲ್ಲಿನ ಮೇಲೆ ತೆಂಗಿನ ಕಾಯಿ ಒಡೆಯೋದು, ಗೇರು ಬೀಜ ಒಡೆದು ಅದರಲ್ಲಿರುವ ಎಣ್ಣೆಯನ್ನು ಎಲೆಯಿಂದ ಒರೆಸಿ ತಿನ್ನುವುದು ಹೀಗೆ ಚತುರ ಕೆಲಸಗಳನ್ನು ಮಂಗಗಳು ಮಾಡುತ್ತವೆ. ಹಲ್ಲುಗಳ ಸ್ವಚ್ಛತೆಯಲ್ಲಿ ಮನುಷ್ಯರನ್ನೇ ಮೀರಿಸಿವೆಯಂತೆ.