
ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ನೀರಿನ ಬಾಟಲಿಗಳ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ. ಬಾಲಕನು, ತಮ್ಮ ಸರಕುಗಳೊಂದಿಗೆ ಪಾದಚಾರಿ ಮಾರ್ಗದಲ್ಲಿ ಕುಳಿತಿರುವ ಬೀದಿ ವ್ಯಾಪಾರಿಗಳಿಗೆ ನೀರಿನ ಬಾಟಲಿಗಳನ್ನು ವಿತರಿಸುತ್ತಾನೆ.
ಕೆಲವು ಮಾರಾಟಗಾರರು ಚಿಕ್ಕ ಬಾಲಕನನ್ನು ಆಶೀರ್ವದಿಸಿದರೆ, ಕೆಲವರು ಆತನ ಮಾನವೀಯತೆಗೆ ಕರಗಿ ಹೋಗಿದ್ದಾರೆ. ಈ ಸುಂದರ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಅಧಿಕಾರಿ, ನಿಮ್ಮ ಸಣ್ಣ ಕರುಣೆಯು ಇತರರ ದಿನವನ್ನು ವಿಶೇಷವಾಗಿಸುತ್ತದೆ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು ಗಳಿಸಿದೆ. ಬಿಸಿಲಿನ ಮಧ್ಯೆಯೂ ಕವರ್ ಹಿಡಿದುಕೊಂಡು ಬಾಲಕ ನೀರು ವಿತರಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿಕ್ಕ ವಯಸ್ಸಿನಲ್ಲೇ ಬಾಲಕನ ಮಾನವೀಯತೆಯ ಗುಣಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.