ಆಸ್ಟ್ರೇಲಿಯಾದ ಬೀಚ್ ಒಂದರಲ್ಲಿ ಮಾನವರ ತುಟಿಗಳನ್ನು ಹೋಲುವ ವಿಚಿತ್ರವಾದ ಜಲಚರವೊಂದು ಪತ್ತೆಯಾಗಿದೆ. ಸಿಡ್ನಿಯ ಬೀಚ್ ನಲ್ಲಿ ಬಿದ್ದುಕೊಂಡಿದ್ದ ಈ ವಿಚಿತ್ರ ಜೀವಿಯನ್ನು ನೋಡಿ ಜನರು ದಂಗಾಗಿದ್ದಾರೆ.
ಬೊಂಡಿ ಬೀಚ್ ನಲ್ಲಿ ಜಾಗಿಂಗ್ ಮಾಡ್ತಿದ್ದ ವ್ಯಕ್ತಿಯೊಬ್ಬ ಮೊದಲು ಈ ಜಲಚರವನ್ನು ಗಮನಿಸಿದ್ದಾನೆ. ವಿಲಕ್ಷಣ ಜೀವಿಯು ದಡಕ್ಕೆ ಕೊಚ್ಚಿಕೊಂಡು ಬಂದಿದೆ. ಕಡಲಜೀವಿಯನ್ನು ಹೋಲ್ತಾ ಇದ್ದ ಬಿಳಿಯ ಜೀವಿ ಅವಶೇಷ ಮಧ್ಯೆ ಬಿದ್ದುಕೊಂಡಿತ್ತು. ಈ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದರ ಮೊನಚಾದ ಬಾಲ ಮತ್ತು ಚರ್ಮವನ್ನು ನೋಡಿದ್ರೆ ಬೋನ್ ಶಾರ್ಕ್ ನಂತೆ ಕಾಣಿಸುತ್ತಿದೆ. ಅರ್ಧ ಮೀಟರ್ ಉದ್ದದ ಈ ಜೀವಿಯ ಚರ್ಮ್ ಶಾರ್ಕ್ ನಂತಿದ್ರೆ, ತುಟಿಗಳು ಮನುಷ್ಯರನ್ನು ಹೋಲ್ತಿವೆ. ಇದನ್ನು ಆಸ್ಟ್ರೇಲಿಯನ್ ನಂಬ್ ಫಿಶ್ ಎಂದು ಕರೆಯುತ್ತಾರಂತೆ.
ಗ್ಯಾಸ್ ತುಂಬಿಕೊಂಡು ಮೀನಿದ ದೇಹ ಉಬ್ಬಿಹೋಗಿದ್ದರಿಂದ ವಿಚಿತ್ರವಾಗಿ ಕಾಣ್ತಿದೆ ಅಂತಾ ತಜ್ಞರು ತಿಳಿಸಿದ್ದಾರೆ. ಆದ್ರೆ ಬೊಂಡಿ ಪ್ರದೇಶದಲ್ಲಿ 20 ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳು ಇಂತಹ ವಿಚಿತ್ರ ಜೀವಿಯನ್ನು ಇದುವರೆಗೂ ನೋಡಿರಲಿಲ್ಲ ಅಂತಾ ಹೇಳ್ತಿದ್ದಾರೆ.