alex Certify ಬಿಹಾರದ ಸರ್ಕಾರಿ ವಿವಿ ಯಡವಟ್ಟು, ವಿದ್ಯಾರ್ಥಿಗೆ ಬಂತು 100ಕ್ಕೆ 151 ಅಂಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಹಾರದ ಸರ್ಕಾರಿ ವಿವಿ ಯಡವಟ್ಟು, ವಿದ್ಯಾರ್ಥಿಗೆ ಬಂತು 100ಕ್ಕೆ 151 ಅಂಕ….!

ಬಿಹಾರ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹಿಂದಿದೆ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರ. ಅದಕ್ಕೆ ಸಾಕ್ಷಿ ಎಂಬಂತೆ ಅಲ್ಲಿನ ಶಾಲಾ – ಕಾಲೇಜುಗಳಲ್ಲಿ ಒಂದಿಲ್ಲೊಂದು ಅಕ್ರಮಗಳು, ಯಡವಟ್ಟುಗಳು ನಡೆಯುತ್ತಲೇ ಇರುತ್ತವೆ. ಇದೀಗ ಬಿಹಾರದ ಸರ್ಕಾರಿ ವಿಶ್ವವಿದ್ಯಾಲಯದ ಪದವಿಪೂರ್ವ ವಿದ್ಯಾರ್ಥಿಯೊಬ್ಬನಿಗೆ 100 ಕ್ಕೆ 151 ಅಂಕ ಬಂದಿರೋದು ಅಚ್ಚರಿಗೆ ಕಾರಣವಾಗಿದೆ.

ದರ್ಭಾಂಗಾ ಜಿಲ್ಲೆಯ ಲಲಿತ್ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದಲ್ಲಿ ನಡೆದಿರೋ ಯಡವಟ್ಟು ಇದು. ಇದೇ ವಿವಿಯಲ್ಲಿ ಎರಡು ವಿಷಯಗಳಲ್ಲಿ ಸೊನ್ನೆ ಅಂಕ ಗಳಿಸಿದ ಇನ್ನೊಬ್ಬ ವಿದ್ಯಾರ್ಥಿಗೆ ಮುಂದಿನ ತರಗತಿಗೆ ಬಡ್ತಿ ನೀಡಿದ ಘಟನೆಯೂ ನಡೆದಿದೆ.

ಬಿಎ ಆನರ್ಸ್‌ ವಿದ್ಯಾರ್ಥಿಗೆ ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ ಈ ರೀತಿ 100ಕ್ಕೆ 151 ಅಂಕ ನೀಡಲಾಗಿದೆ. ಫಲಿತಾಂಶ ನೋಡಿ ಖುದ್ದು ವಿದ್ಯಾರ್ಥಿಯೇ ದಂಗಾಗಿದ್ದಾನೆ. ರಿಸಲ್ಟ್‌ ಬಿಡುಗಡೆಗೂ ಮುನ್ನ ಅದನ್ನು ಪರಿಶೀಲಿಸಬೇಕಿತ್ತು ಅಂತಾ ಆತ ಹೇಳಿದ್ದಾನೆ.

ಇನ್ನೋರ್ವ ಬಿಕಾಂ ಎರಡನೇ ವರ್ಷದಲ್ಲಿ ಓದ್ತಾ ಇದ್ದ ವಿದ್ಯಾರ್ಥಿ ಅಕೌಂಟ್ಸ್‌ ಹಾಗೂ ಫೈನಾನ್ಸ್‌ ವಿಷಯದ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಾನೆ. ಆದರೂ ಆತನನ್ನು ಮುಂದಿನ ತರಗತಿಗೆ ಕಳುಹಿಸಲಾಗಿತ್ತು. ಇವೆರಡೂ ಟೈಪಿಂಗ್‌ನಲ್ಲಾದ ತಪ್ಪುಗಳು ಅಂತಾ ವಿವಿ ಹೇಳಿಕೊಂಡಿದೆ. ಅದನ್ನು ಸರಿಪಡಿಸಿಕೊಂಡಿದ್ದೇವೆ ಅಂತಾ ಸಮರ್ಥಿಸಿಕೊಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...