ಸಿನಿಮಾ ಹಿನ್ನೆಲೆಯನ್ನು ಹೊಂದಿರದೇ ಇರುವವರೂ ಸಿನಿಮಾ ಇಂಡಸ್ಟ್ರಿಯಲ್ಲಿ ಗೆಲ್ಲಬಹುದು ಎಂಬುದಕ್ಕೆ ಬಾಲಿವುಡ್ ನಟ ರಾಜ್ಕುಮಾರ್ ಪ್ರತ್ಯಕ್ಷ ಉದಾಹರಣೆ. ಬಾಲಿವುಡ್ನಲ್ಲಿ ತಾವು ನಡೆದು ಬಂದ ಹಾದಿಯನ್ನು ರಾಜ್ಕುಮಾರ್ ವಿವರಿಸಿದ್ದಾರೆ. ಹಿಟ್ : ದಿ ಫಸ್ಟ್ ಕೇಸ್ ಬಿಡುಗಡೆಯ ಮುನ್ನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ರಾಜ್ ಕುಮಾರ್ ವಿದ್ಯಾರ್ಥಿಯಾಗಿ ಹಾಗೂ ಅದರ ಬಳಿಕ ತಾನು ಮುಂಬೈನಲ್ಲಿ ಯಾವೆಲ್ಲ ರೀತಿಯಲ್ಲಿ ಕಷ್ಟ ಪಟ್ಟಿದ್ದೇನೆ ಎಂಬುದನ್ನು ವಿವರಿಸಿದ್ದಾರೆ.
ತಮ್ಮ ಕಠಿಣ ದಿನಗಳನ್ನು ನೆನೆದ ರಾಜ್ ಕುಮಾರ್, ಸಿನಿಮಾ ಹಿನ್ನೆಲೆಯನ್ನು ಹೊಂದಿಲ್ಲದೇ ಇರುವವರಿಗೆ ಇದು ತುಂಬಾನೇ ಕಷ್ಟ. ನಾನು ಗುರುಗಾಂವ್ನಲ್ಲಿ ಅವಿಭಕ್ತ ಕುಟುಂಬದಲ್ಲಿ ಬೆಳೆದವನು, ಆ ಸಮಯದಲ್ಲಿ ಅದು ಒಂದು ಸಣ್ಣ ಪಟ್ಟಣವಾಗಿತ್ತು. ನಾನು ಬಾಲ್ಯದಿಂದಲೂ ಸಿನಿಮಾಗಳನ್ನು ಪ್ರೀತಿಸುತ್ತಿದ್ದೆ , ನನಗೆ ಆಗಲೂ ಸಿನಿಮಾವನ್ನು ಮಾಡಬೇಕು ಎಂಬ ಆಸೆಯಿತ್ತು. ನಾನು ರಂಗಭೂಮಿಯಲ್ಲಿದ್ದಾಗ ದೆಹಲಿಗೆ 70 ಕಿಲೋಮೀಟರ್ ದೂರ ಸೈಕಲ್ನಲ್ಲಿಯೇ ಬರುತ್ತಿದ್ದೆ ಎಂದು ಹೇಳಿದ್ದಾರೆ.
ನಾನು ಸಿನಿಮಾ ಇಂಡಿಸ್ಟ್ರಿಯಲ್ಲಿ ತುಂಬಾನೆ ಕಷ್ಟಪಟ್ಟಿದ್ದೇನೆ. ನಾನು ಕಾಲ ಕ್ರಮೇಣ ಮುಂಬೈಗೆ ಶಿಫ್ಟ್ ಆದೆ. ಅಲ್ಲಂತೂ ಜೀವನ ಇನ್ನೂ ಕಷ್ಟವಾಯ್ತು. ನನ್ನ ಬ್ಯಾಂಕಿನಲ್ಲಿ ಕೇವಲ 18 ರೂಪಾಯಿ ಇತ್ತು. ನಾನು ಕೇವಲ ಪಾರ್ಲೆ ಜಿ ಬಿಸ್ಕಟ್ ತಿಂದು ನನ್ನ ಇಡೀ ದಿನವನ್ನು ಕಳೆದದ್ದೂ ಇದೆ. ಬಟ್ ನನ್ನ ಸ್ನೇಹಿತರು ನನಗೆ ಸಹಾಯ ಮಾಡುತ್ತಿದ್ದರು. ನನಗೆ ಪ್ಲಾನ್ ಬಿ ಎಂಬುದೇ ಇರಲಿಲ್ಲ. ನನಗೆ ನಟನಾಗಬೇಕು ಎಂಬ ಕನಸು ಮಾತ್ರ ಇತ್ತು. ಎಂದು ಹೇಳಿದ್ದಾರೆ.