ಸಂಜೆ ಸಮಯಕ್ಕೆ ಟೀ ಜತೆಗೆ ಬಿಸಿ ಬಿಸಿಯಾದ ಮೈಸೂರು ಬೋಂಡಾ ಇದ್ದರೆ ಹೊಟ್ಟೆ ತುಂಬಿದ್ದೇ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಮೈಸೂರು ಬೋಂಡಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
½ ಕಪ್ – ಉದ್ದಿನಬೇಳೆ, ಕರಿಬೇವು – 5 ಸಣ್ಣಗೆ ಹೆಚ್ಚಿದ್ದು, ಹಸಿಮೆಣಸು – 1 ಹೆಚ್ಚಿಟ್ಟುಕೊಳ್ಳಿ, ಕಾಳುಮೆಣಸು – 1 ಟೀ ಸ್ಪೂನ್, ತೆಂಗಿನಕಾಯಿ – 2 ಟೇಬಲ್ ಸ್ಪೂನ್ ಸಣ್ಣಗೆ ಕತ್ತರಿಸಿಕೊಳ್ಳಿ, ಅಕ್ಕಿ ಹಿಟ್ಟು – 1 ಟೀ ಸ್ಪೂನ್, ಇಂಗು – ಚಿಟಿಕೆ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – ಕರಿಯಲು.
ಮಾಡುವ ವಿಧಾನ:
ಉದ್ದಿನಬೇಳೆಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ನಂತರ ಒಂದು ಮಿಕ್ಸಿ ಜಾರಿಗೆ ಉದ್ದಿನಬೇಳೇ ಹಾಕಿ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ.
ನಂತರ ಈ ಹಿಟ್ಟಿಗೆ ಹಸಿಮೆಣಸು, ಕರಿಬೇವು, ಕಾಳುಮೆಣಸು ಇಂಗು, ಅಕ್ಕಿಹಿಟ್ಟು, ಉಪ್ಪು, ತೆಂಗಿನಕಾಯಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಎಣ್ಣೆ ಕರಿಯಲು ಇಟ್ಟು ಕೈಯಿಂದ ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ.