ಬೇಕಾಗುವ ಸಾಮಾಗ್ರಿಗಳು:
ಕರಿಮೆಣಸು – 1 ಟೀ ಸ್ಪೂನ್, ಹುಣಸೆ ಹಣ್ಣು – ಅರ್ಧ ನಿಂಬೆ ಹಣ್ಣು ಗಾತ್ರದಷ್ಟು ದೊಡ್ಡದು, ಜಜ್ಜಿದ ಬೆಳ್ಳುಳ್ಳಿ – 8, ಜೀರಿಗೆ – ಅರ್ಧ ಟೀ ಸ್ಪೂನ್, ಒಣಮೆಣಸು – 6, ಅರಶಿನ ಪುಡಿ – ಸ್ವಲ್ಪ, ಸಾಸಿವೆ – 1/4 ಟೀ ಸ್ಪೂನ್, ತುರಿದ ಕೊಬ್ಬರಿ – ಅರ್ಧ ಕಪ್, ತುಪ್ಪ- 2 ಟೀ ಸ್ಪೂನ್, ಕರಿಬೇವು ಸೊಪ್ಪು- ಸ್ವಲ್ಪ, ಕೊತ್ತಂಬರಿಸೊಪ್ಪು- ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಕರಿಮೆಣಸು, ಜೀರಿಗೆ, ಒಣಮೆಣಸು ಹುರಿಯಿರಿ. ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ. ಜೊತೆಗೆ ಅರಶಿನ ಪುಡಿ ಸ್ವಲ್ಪ, ಬೆಳ್ಳುಳ್ಳಿ, ಸ್ವಲ್ಪ ಕರಿಬೇವುಸೊಪ್ಪು, ತುರಿದ ಕೊಬ್ಬರಿಗೆ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಾಣಲೆಗೆ ತುಪ್ಪ ಅಥವಾ ಎಣ್ಣೆ ಹಾಕಿ ಇದಕ್ಕೆ ಜಜ್ಜಿದ ಬೆಳ್ಳುಳ್ಳು, ಸಾಸಿವೆ ಹಾಕಿ ಇದು ಸಿಡಿದ ಕೂಡಲೇ ಕರಿಬೇವುಸೊಪ್ಪು ಹಾಕಿ, ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಮಿಕ್ಸ್ ಮಾಡಿ.
ನಂತರ ನೀರಲ್ಲಿ ನೆನೆಸಿಟ್ಟ ಹುಣಸೆಹಣ್ಣು ಹಾಕಿ, ಜೊತೆಗೆ ಕೊತ್ತಂಬರಿಸೊಪ್ಪು ಹಾಕಿ ಮಿಕ್ಸ್ ಮಾಡಿ ಒಂದು ಕುದಿ ಬಂದಾಗ ಸ್ಟೌ ಆಫ್ ಮಾಡಿದರೆ ಅನ್ನದ ಜತೆ ಸವಿಯಲು ರುಚಿಯಾದ ಮೆಣಸಿನ ಸಾಂಬಾರ್ ಸಿದ್ಧ.