ಮೈ ಕೊರೆಯುವ ಚಳಿ. ಬೆಳಿಗ್ಗೆ ಏಳುವುದು ಕಷ್ಟದ ಕೆಲಸ. ಹಾಗಿರುವಾಗ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಚಳಿ ಶುರುವಾಯ್ತು ಎಂದ್ರೆ ಬಿಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಲು ಎಲ್ಲರೂ ಇಷ್ಟ ಪಡ್ತಾರೆ. ಆದ್ರೆ ಬಿಸಿ ನೀರು ಅನೇಕ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ.
ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಚರ್ಮ ಮತ್ತಷ್ಟು ಒಣಗುವುದಲ್ಲದೆ, ಬೂದಿ ಬೂದಿಯಾದಂತೆನಿಸುತ್ತದೆ. ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಚಳಿಗಾಲದಲ್ಲಿ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಕಷ್ಟಸಾಧ್ಯ. ಹಾಗಂತ ಬಿಸಿ ನೀರು ಒಳ್ಳೆಯದಲ್ಲ. ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ಚರ್ಮಕ್ಕೆ ಯಾವುದೇ ಹಾನಿಯಿಲ್ಲ.
ಚಳಿಗಾಲದಲ್ಲಿ ತುರಿಕೆ ಸಮಸ್ಯೆ ವಿಪರೀತವಾಗಿ ಕಾಡುತ್ತದೆ. ಕೆಲವೊಬ್ಬರಿಗೆ ಇದರಿಂದ ಗಾಯಳಾಗುವುದುಂಟು. ಇದರಿಂದ ನೆಮ್ಮದಿ ಪಡೆಯಲು ಆಲಿವ್ ಆಯಿಲ್ ಅಥವಾ ತೆಂಗಿನ ಎಣ್ಣೆಯ ನಾಲ್ಕು ಹನಿಯನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಬೇಕು.
ಇದರಿಂದ ತೇವಾಂಶ ಹಾಗೆ ಇರುವುದಲ್ಲದೇ ಒಣ ಚರ್ಮದ ಸಮಸ್ಯೆ ಇರುವುದಿಲ್ಲ. ನೀರು ಜಾಸ್ತಿ ಬಿಸಿ ಇದ್ದರೆ ಮೈಮೇಲೆ ಕೆಂಪು ಕಲೆಗಳಾಗುವ ಸಾಧ್ಯತೆಯೂ ಇದೆ. ಹಾಗಾಗಿ ಆದಷ್ಟು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಪ್ರತಿದಿನ ಸ್ನಾನ ಮಾಡಿ.