ಹೆಚ್ಚಿನ ಜನರು ಬೆಳಗ್ಗೆ ಎದ್ದಕೂಡ್ಲೆ ಖಾಲಿ ಹೊಟ್ಟೆಯಲ್ಲಿ ಚಹಾದೊಂದಿಗೆ ರಸ್ಕ್ ತಿನ್ನಲು ಇಷ್ಟಪಡುತ್ತಾರೆ. ಅನೇಕರು ದಿನಕ್ಕೆ ಮೂರ್ನಾಲ್ಕು ಬಾರಿ ಈ ರೀತಿ ಚಹಾ ಮತ್ತು ರಸ್ಕ್ ಸವಿಯುವ ಅಭ್ಯಾಸ ಹೊಂದಿರ್ತಾರೆ. ಬೆಳಗ್ಗೆ ಎದ್ದ ತಕ್ಷಣ ಟೀ ಜೊತೆ ರಸ್ಕ್ ತಿನ್ನುವುದರಿಂದ ಆರೋಗ್ಯಕ್ಕೆ ಸಮಸ್ಯೆಯಾಗುತ್ತದೆ. ಈ ರಸ್ಕ್ ಕೂಡ ಆರೋಗ್ಯಕ್ಕೆ ಹಾನಿಕಾರಕ. ಯಾಕಂದ್ರೆ ಅದನ್ನು ಮೈದಾದಿಂದ ಮಾಡಿರುತ್ತಾರೆ. ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕಳಪೆ ಗುಣಮಟ್ಟದ ಎಣ್ಣೆಯನ್ನು ಸಹ ಬಳಸಿರುತ್ತಾರೆ.
ಸಾಮಾನ್ಯವಾಗಿ ಮೈದಾ ಹಿಟ್ಟನ್ನೇ ರಸ್ಕ್ ತಯಾರಿಸಲು ಬಳಸಲಾಗುತ್ತದೆ, ಗೋಧಿಯಿಂದ ಮಾಡಿದ ರಸ್ಕ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಜೊತೆಗೆ ರವೆ, ಸಂಸ್ಕರಿಸಿದ ಸಸ್ಯಜನ್ಯ ಎಣ್ಣೆ, ಕೃತಕ ಸುವಾಸನೆ, ಸಂರಕ್ಷಕಗಳು ಇತ್ಯಾದಿಗಳನ್ನು ಸೇರಿಸಲಾಗುತ್ತದೆ. ಇವೆಲ್ಲವೂ ಆರೋಗ್ಯವನ್ನು ಕೆಡಿಸುತ್ತವೆ. ಕೇವಲ ಎರಡು ರಸ್ಕ್ ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ಸ್ಥೂಲಕಾಯತೆ ನಿಮ್ಮನ್ನು ಆವರಿಸಬಹುದು.
ಚಹಾದೊಂದಿಗೆ ಟೋಸ್ಟ್ ತಿನ್ನುವುದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಏಕೆಂದರೆ ಇದು ಎಲ್ಲಾ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೃದಯಕ್ಕೂ ಸಮಸ್ಯೆ ಉಂಟುಮಾಡುತ್ತದೆ. ಚಹಾದೊಂದಿಗೆ ಟೋಸ್ಟ್ ತಿನ್ನುವುದರಿಂದ ಕರುಳಿನಲ್ಲಿ ಗುಳ್ಳೆಗಳ ಸಮಸ್ಯೆಗೆ ಕಾರಣವಾಗಬಹುದು. ಇದರಿಂದ ಗ್ಯಾಸ್ಟ್ರಿಕ್ ಕೂಡ ಆಗುತ್ತದೆ. ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ. ಹೊಟ್ಟೆಯಲ್ಲಿ ಇನ್ನೂ ಅನೇಕ ತೊಂದರೆಗಳಿಗೆ ರಸ್ಕ್ ಕಾರಣವಾಗುತ್ತದೆ.