ಅರ್ಧ ಕೆ.ಜಿ. ಕಡಲೆಬೇಳೆ, 10 ಹಸಿ ಮೆಣಸಿನ ಕಾಯಿ, ಅರ್ಧ ತೆಂಗಿನ ಕಾಯಿ, ಕೊತ್ತಂಬರಿ ಸೊಪ್ಪು, 4 ಈರುಳ್ಳಿ, 1 ಚೂರು ಶುಂಠಿ, ಉಪ್ಪು, ಎಣ್ಣೆ.
ತಯಾರಿಸುವ ವಿಧಾನ :
ಕಡಲೆಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು 2 ಗಂಟೆ ನೀರಿನಲ್ಲಿ ನೆನೆಸಿರಿ. ಅದು ಚೆನ್ನಾಗಿ ನೆಂದ ಬಳಿಕ ನೀರು ತೆಗೆದು ರುಬ್ಬಿಕೊಳ್ಳಿ. ಪೂರ್ಣ ಸಣ್ಣಗೆ ರುಬ್ಬದೇ ಅರ್ಧ ರುಬ್ಬಿಕೊಳ್ಳಿ.
ರುಬ್ಬುವ ವೇಳೆ ತೆಂಗಿನ ತುರಿ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಹಸಿ ಶುಂಠಿ, ಸ್ವಲ್ಪ ಉಪ್ಪು ಹಾಕಿ ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಬೆರೆಸಿರಿ.
ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ ರುಬ್ಬಿದ ಹಿಟ್ಟನ್ನು ಉಂಡೆಗಳಾಗಿ ಮಾಡಿಕೊಂಡು ಸ್ವಲ್ಪ ಕೈಯಿಂದ ತಟ್ಟಿಕೊಂಡು ಎಣ್ಣೆಯಲ್ಲಿ ಹಾಕಿರಿ. ತಿರುವಿ ಹಾಕುತ್ತಾ ಕೆಂಪಗೆ ಆಗುವವರೆಗೆ ಕರಿದು ಎಣ್ಣೆಯಿಂದ ತೆಗೆಯಿರಿ. ಬಿಸಿಯಾಗಿರುವಾಗಲೇ ರುಚಿ ನೋಡಿ.