alex Certify ಬಿಸಿ ಬಿಸಿ ಅನ್ನದ ಜತೆ ಸಖತ್ ಕಾಂಬಿನೇಷನ್ ಈ ಚಟ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಬಿಸಿ ಅನ್ನದ ಜತೆ ಸಖತ್ ಕಾಂಬಿನೇಷನ್ ಈ ಚಟ್ನಿ

ಅಡುಗೆ ಮಾಡುವುದಕ್ಕೆ ಯಾವುದೇ ತರಕಾರಿ ಇಲ್ಲದೇ ಇದ್ದಾಗ ಅಥವಾ ದಿನಾ ಸಾಂಬಾರು ತಿಂದು ಬೇಜಾರು ಆದಾಗ ಒಮ್ಮೆ ಈ ಒಣಮೆಣಸಿನಕಾಯಿ ಚಟ್ನಿ ಮಾಡಿ ನೋಡಿ. ಇದು ಬಿಸಿ ಅನ್ನದ ಜತೆ ನೆಂಚಿಕೊಳ್ಳಲು ಸಖತ್ ಆಗಿರುತ್ತದೆ.

ಬೇಕಾಗುವ ಸಾಮಗ್ರಿಗಳು: 1ಕಪ್ ತೆಂಗಿನಕಾಯಿ ತುರಿ, 2 ಟೀ ಸ್ಪೂನ್ ಕೊತ್ತಂಬರಿ, ¼ ಟೀ ಸ್ಪೂನ್ ಜೀರಿಗೆ, 5 ಕಾಳು ಮೆಂತೆ, 1ಟೀ ಸ್ಪೂನ್- ಕಾಳುಮೆಣಸು, ಗೋಲಿ ಗಾತ್ರದಷ್ಟು- ಹುಣಸೆಹಣ್ಣು, 2 ರಿಂದ 3 ಎಸಳು- ಬೆಳ್ಳುಳ್ಳಿ , ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ ತೆಂಗಿಕಾಯಿ ತುರಿ, ಕೊತ್ತಂಬರಿ ಬೀಜ, ಜೀರಿಗೆ, ಬೆಳ್ಳುಳ್ಳಿ, ಮೆಂತೆಕಾಳು, ಕಾಳುಮೆಣಸು, ಉಪ್ಪು, ಹುಣಸೆಹಣ್ಣು ಹಾಕಿ ರುಬ್ಬಿಕೊಳ್ಳಿ. ಬೇಕಿದ್ದರೆ ತುಸು ನೀರು ಚಿಮುಕಿಸಿಕೊಂಡು ರುಬ್ಬಿಕೊಳ್ಳಿ. ಸಾಧ್ಯವಾದಷ್ಟು ಇದು ಗಟ್ಟಿಯಾಗಿದ್ದರೆ ಒಳ್ಳೆಯದು. ಬಿಸಿ ಬಿಸಿ ಅನ್ನದ ಜತೆಗೆ ಈ ಚಟ್ನಿ ಇದ್ದರೆ ಊಟ ಹೊಟ್ಟೆಗೆ ಇಳಿದಿದ್ದೆ ಗೊತ್ತಾಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...