ಬೇಕಾಗುವ ಸಾಮಾಗ್ರಿಗಳು: ಮೈದಾ-3 ಕಪ್, 2 ಕಪ್ ಮೊಸರು (ಜಾಸ್ತಿ ಹುಳಿ ಇರಬಾರದು), ಜೀರಿಗೆ 2 ಟೀ ಸ್ಪೂನ್, 2 ಟೀ ಸ್ಪೂನ್ ಸಕ್ಕರೆ, 2 ಟೀ ಸ್ಪೂನ್ ಕಡಲೆ ಹುಡಿ, ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನತುರಿ ಸ್ವಲ್ಪ, ಸಣ್ಣಗೆ ಹೆಚ್ಚಿಕೊಂಡ 2 ಇಂಚಿನಷ್ಟು ಶುಂಠಿ, ಹಸಿಮೆಣಸು 4ರಿಂದ 5, ಕರಿಬೇವು ಸೊಪ್ಪು.
ಮಾಡುವ ವಿಧಾನ: ಸಣ್ಣಗೆ ಹೆಚ್ಚಿಕೊಂಡ ಶುಂಠಿ, ಹಸಿಮೆಣಸು, ಕರಿಬೇವು ಸೊಪ್ಪು ಹಾಕಬೇಕು. ಜತೆಗೆ ತೆಂಗಿನತುರಿ ಹಾಕಿ ಮಿಕ್ಸ್ ಮಾಡಬೇಕು. ಬಳಿಕ 2 ಕಪ್ ಮೊಸರು, ಇದಕ್ಕೆ 2 ಟೀ ಸ್ಪೂನ್ ಜೀರಿಗೆ, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಬೆರೆಸಬೇಕು. ಬಳಿಕ 2 ಟೀ ಸ್ಪೂನ್ ಕಡಲೆ ಹುಡಿ ಹಾಗೂ ಮೈದಾ ಹಿಟ್ಟು ಹಾಕಿ ಚೆನ್ನಾಗಿ ಬೆರಸಬೇಕು. ಜಾಸ್ತಿ ಗಟ್ಟಿಯೂ ಅಲ್ಲದೆ, ಜಾಸ್ತಿ ತೆಳ್ಳಗೆಯೂ ಅಲ್ಲದೆ ಬೋಂಡಾ ಮಾದರಿಯಲ್ಲಿ ಹಿಟ್ಟು ತಯಾರಿಸಬೇಕು. ಮೂರು ಗಂಟೆಗಳ ಕಾಲ ಈ ಹಿಟ್ಟನ್ನು ಮುಚ್ಚಿಟ್ಟು ಹಾಗೆ ಬಿಡಬೇಕು.
ಮೂರು ಗಂಟೆಗಳ ಬಳಿಕ ಸ್ವಲ್ವ ಸೋಡಾ ಬೆರೆಸಬೇಕು. ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಬಜ್ಜಿ ಕರಿಯಬೇಕು. ಮಧ್ಯಮ ಉರಿಯಲ್ಲಿಟ್ಟು ಬಜ್ಜಿ ಕರಿಯಬೇಕು. ಚೆನ್ನಾಗಿ ಕರಿದ ನಂತರ ಬಿಸಿ ಬಿಸಿ ಮಂಗಳೂರು ಬಜ್ಜಿ ಸವಿಯಲು ಸಿದ್ಧ.