ಮಧ್ಯಾಹ್ನದ ಬಿಸಿಯೂಟ ಯೋಜನೆ ಕುರಿತಂತೆ ಅಧ್ಯಯನವೊಂದರಲ್ಲಿ ಪ್ರಮುಖ ಮಾಹಿತಿ ಬಹಿರಂಗವಾಗಿತ್ತು. ಬಿಸಿಯೂಟದ ಕಾರಣಕ್ಕೆ ಮಕ್ಕಳಲ್ಲಿ ಪೌಷ್ಟಿಕತೆ ಕಂಡುಬಂದಿದ್ದು, ಇಂತಹ ಊಟವನ್ನು ಸೇವಿಸಿದ ವಿದ್ಯಾರ್ಥಿನಿಯರು ಮದುವೆಯಾದ ಬಳಿಕ ಅವರುಗಳಿಗೆ ಜನಿಸಿದ ಮಕ್ಕಳಲ್ಲೂ ಅಪೌಷ್ಟಿಕತೆ ಕಂಡುಬಂದಿತ್ತು. ಇದರ ಮಧ್ಯೆ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ.
ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಉತ್ತಮ ಆಹಾರ ನೀಡುವ ಮೂಲಕ ಪೌಷ್ಟಿಕತೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದ್ದು ಈ ಬಾರಿ ಅಕ್ಕಿ ಮತ್ತು ಗೋಧಿಯನ್ನು ವಿದ್ಯಾರ್ಥಿಗಳ ಮನೆಗಳಿಗೆ ತಲುಪಿಸಲಾಗಿತ್ತು. ಇದೀಗ ಅದನ್ನು ಆಹಾರವಾಗಿ ಪರಿವರ್ತಿಸಲು ತಗಲುವ ವೆಚ್ಚವನ್ನೂ ಸಹ ಭರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಕಾಲೇಜು ಉಪನ್ಯಾಸಕರಿಗೆ ‘ಗುಡ್ ನ್ಯೂಸ್’
ಇದಕ್ಕಾಗಿ ಮೇ ಮತ್ತು ಜೂನ್ ತಿಂಗಳ ಬೇಸಿಗೆ ರಜೆಯ 50 ದಿನಗಳಿಗೆ ಅನ್ವಯವಾಗುವಂತೆ 1 ರಿಂದ 8ನೇ ತರಗತಿಯ 4 ಲಕ್ಷ ವಿದ್ಯಾರ್ಥಿಗಳಿಗೆ ನೇರವಾಗಿ ಅವರುಗಳ ಖಾತೆಗೆ ಹಣವನ್ನು ಹಾಕಲಾಗುತ್ತದೆ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 250 ರೂ. ಹಾಗೂ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 390 ರೂ. ನೀಡಲಾಗುತ್ತದೆ.