ಬಿಸಿಬಿಸಿ ಬಿಸಿಬೇಳೆ ಬಾತ್ ಮಾಡಿಕೊಟ್ಟರೆ ಯಾರು ಬೇಡ ಎನ್ನುತ್ತಾರೆ ಹೇಳಿ. ಬಿಸಿಬೇಳೆ ಬಾತ್ ಪೌಡರ್ ಒಮ್ಮೆ ಮನೆಯಲ್ಲಿ ಮಾಡಿಕೊಟ್ಟರೆ ಇದನ್ನು ತಿನ್ಬೇಕು ಅನಿಸಿದಾಗಲೆಲ್ಲಾ ಈ ಪೌಡರ್ ಉಪಯೋಗಿಸಿ ಸುಲಭದಲ್ಲಿ ಮಾಡಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು:
4 ಟೀ ಸ್ಪೂನ್ – ಧನಿಯಾ ಬೀಜ, 4 ಟೀ ಸ್ಪೂನ್ – ಕಡಲೆಬೇಳೆ, 1 ಟೀ ಸ್ಪೂನ್ – ಎಳ್ಳು, 2 ಟೀ ಸ್ಪೂನ್ – ಉದ್ದಿನಬೇಳೆ, 12 – ಬ್ಯಾಡಗಿ ಮೆಣಸು, 1 ಟೀ ಸ್ಪೂನ್ – ಜೀರಿಗೆ, 4 – ಲವಂಗ, ½ ಟೀ ಸ್ಪೂನ್ – ಕಾಳುಮೆಣಸು, ಏಲಕ್ಕಿ – 2, ½ ಇಂಚು – ಚಕ್ಕೆ, ಗಸಗಸೆ – 1 ½ ಟೀ ಸ್ಪೂನ್, 1/4 ಟೀ ಸ್ಪೂನ್ – ಮೆಂತೆಕಾಳು, 15 – ಕರಿಬೇವಿನ ಎಸಳು, ಇಂಗು – 1 ಟೀಸ್ಪೂನ್, 2 ಟೀ ಸ್ಪೂನ್ – ಕೊಬ್ಬರಿ ತುರಿ.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಧನಿಯಾ ಬೀಜ, ಮೆಂತೆ, ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ ಹಾಕಿ ಪರಿಮಳ ಬರುವವರಗೆ ಹುರಿದುಕೊಳ್ಳಿ. ನಂತರ ಅದೇ ಪ್ಯಾನ್ ಗೆ ಸಾಸಿವೆ, ಗಸಗಸೆ, ಕರಿಬೇವು ಸೇರಿಸಿ ಹುರಿದುಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ. ನಂತರ ಪ್ಯಾನ್ ಗೆ ಚಕ್ಕೆ, ಲವಂಗ,ಏಲಕ್ಕಿ, ಕಾಳುಮೆಣಸು ಹಾಕಿ ಸ್ವಲ್ಪ ಫ್ರೈ ಮಾಡಿ ಪಾತ್ರೆಗ ಹಾಕಿಕೊಳ್ಳಿ.
ಹಾಗೇ ಒಣಮೆಣಸು ಗರಿಗರಿಯಾಗುವವರಗೆ ಹುರಿದುಕೊಂಡು ಎತ್ತಿಟ್ಟುಟುಕೊಳ್ಳಿ. ನಂತರ ಕೊಬ್ಬರಿ ಕೂಡ ಕೂಡ ಪರಿಮಳ ಬರುವವರಗೆ ಫ್ರೈ ಮಾಡಿ. ಇದನ್ನು ತಣ್ಣಗಾಗಲು ಬಿಟ್ಟುಬಿಡಿ. ಒಂದು ಮಿಕ್ಸಿ ಜಾರಿಗೆ ಹುರಿದಿಟ್ಟುಕೊಂಡ ಮಸಾಲೆಗಳನ್ನೆಲ್ಲಾ ಸೇರಿಸಿ ಸ್ವಲ್ಪ ಇಂಗು ಹಾಕಿ ನಯವಾಗಿ ಪುಡಿಮಾಡಿಕೊಳ್ಳಿ. ಒಂದು ಗಾಜಿನ ಬಾಟಲಿಯಲ್ಲಿ ಇದನ್ನು ತುಂಬಿಸಿಡಿ.