ಬಿಸಿನೀರು ಕುಡಿಯುವುದು ಒಳ್ಳೆಯದು ಎಂಬುದೇನೋ ನಿಜ. ಆದರೆ ಅದರ ಬಿಸಿ ಎಷ್ಟರ ಪ್ರಮಾಣದಲ್ಲಿದ್ದರೆ ಒಳ್ಳೆಯದು, ವಿಪರೀತ ಹೆಚ್ಚು ಬಿಸಿ ನೀರು ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂಬುದು ನಿಮಗೆ ಗೊತ್ತೇ?
ಚಹಾ, ಕಾಫಿ ಕುಡಿಯುವಷ್ಟು ಬಿಸಿಯಾದ ನೀರು ಕುಡಿದರೆ ದೇಹ ಹಲವು ಸಮಸ್ಯೆಗಳನ್ನು ಎದುರಿಸಬಹುದು. ಬಿಸಿ ನೀರಿನ ಸೇವನೆಯಿಂದ ದೇಹ ತೂಕ ಕಡಿಮೆಯಾಗಿ ತ್ವಚೆಯ ಹಲವು ಸಮಸ್ಯೆಗಳು ದೂರವಾಗುತ್ತವೆ ಎಂಬುದೇನೋ ನಿಜ. ಆದರೆ ವಿಪರೀತ ಬಿಸಿ ನೀರು ಕುಡಿಯುವುದರಿಂದ ಬಾಯಿಯಲ್ಲಿ ಬೊಕ್ಕೆಗಳು ಕಾಣಿಸಿಕೊಂಡಾವು.
ಚಳಿಗಾಲದಲ್ಲಿ ವಿಪರೀತ ಬಿಸಿಯಾದ ನೀರು ಕುಡಿಯುವುದರಿಂದ ತುಟಿ ಹಾಗೂ ಬಾಯಿಯ ಒಳಭಾಗ ಸುಡಬಹುದು. ಆಹಾರ ಸೇವಿಸುವಾಗ ನಿಮಗೆ ನೋವಾಗಬಹುದು. ಬಿಸಿನೀರಿನ ಸೇವನೆಯಿಂದ ಮನಸ್ಸು ಚಂಚಲಗೊಳ್ಳಬಹುದು. ಹಾಗಾಗಿ ಚಳಿಗಾಲದಲ್ಲಿ ಹದ ಬಿಸಿಯಾದ ನೀರನ್ನೇ ಕುಡಿಯಿರಿ.
ವಿಪರೀತ ಬಿಸಿ ಕುಡಿಯುವುದರಿಂದ ಮೆದುಳಿನ ಕೋಶಗಳಲ್ಲೂ ಸಮಸ್ಯೆಗಳು ಕಾಣಿಸಿಕೊಂಡಾವು. ಬಿಸಿ ಇಷ್ಟ ಎಂಬ ಕಾರಣಕ್ಕೆ ವಿಪರೀತ ಬಿಸಿ ಕುಡಿಯುವ ಹವ್ಯಾಸ ಬೆಳೆಸಿಕೊಳ್ಳದಿರಿ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.