ಪದೇ ಪದೇ ನಿಮಗೆ ಆರೋಗ್ಯ ಕೈ ಕೊಟ್ಟಾಗ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಈ ಕೆಲವು ತರಕಾರಿಗಳನ್ನು ಸೇವಿಸುವ ಮುಖಾಂತರ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ದೇಹದಲ್ಲಿ ಬಿಳಿ ರಕ್ತಕಣ ಹೆಚ್ಚಾಗಬೇಕಾದರೆ ವಿಟಮಿನ್ ಸಿ ದೇಹಕ್ಕೆ ಬೇಕು. ಇದು ನಿಂಬೆಹಣ್ಣು, ಕಿತ್ತಳೆ, ಮೂಸುಂಬೆ ಮತ್ತು ಹುಣಸೆ ಹುಳಿಯಿಂದ ಸಿಗುತ್ತದೆ. ಈ ಹಣ್ಣುಗಳ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಈ ಹಣ್ಣುಗಳಿಂದಲೂ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಲಭ್ಯವಿರುವುದು ಕ್ಯಾಪ್ಸಿಕಂನಲ್ಲಿ. ಹಾಗಾಗಿ ಇದನ್ನು ನಿಮ್ಮ ಆಹಾರದ ಮೆನುವಿನಲ್ಲಿ ಸೇರಿಸಿಕೊಳ್ಳಿ. ರಕ್ತದೊತ್ತಡವನ್ನು ತಗ್ಗಿಸುವ ಗುಣವಿರುವ ಬೆಳ್ಳುಳ್ಳಿ, ಪೋಷಕಾಂಶಗಳ ಆಗರವಾಗಿರುವ ಬ್ರೊಕೋಲಿ, ಕೊಲೆಸ್ಟ್ರಾಲ್ ಕಡಿಮೆ ಮಾಡುವ ಶುಂಠಿ, ದೇಹಕ್ಕೆ ಆರೋಗ್ಯಕಾರಿ ಕೊಬ್ಬನ್ನು ಒದಗಿಸುವ ಬಾದಾಮಿ, ಔಷಧೀಯ ಗುಣವುಳ್ಳ ಅರಶಿನವನ್ನು ಆಹಾರ ರೂಪದಲ್ಲಿ ಸೇವಿಸುತ್ತಿರಿ.