ಬಿಳಿ ಬೂಟು ಎಲ್ಲಾ ಉಡುಗೆಗಳಿಗೆ ಹೊಂದಿಕೆಯಾಗುತ್ತದೆ. ಇದು ನಿಮಗೆ ಪರಿಪೂರ್ಣ ನೋಟವನ್ನು ನೀಡುತ್ತದೆ. ಆದರೆ ಇದನ್ನು ಒಮ್ಮೆ ಧರಿಸಿದರೆ ತಕ್ಷಣ ಕೊಳೆಯಾಗುತ್ತದೆ. ಹಾಗಾಗಿ ಇದನ್ನು ಸ್ವಚ್ಛಗೊಳಿಸುವುದು ಬಹಳ ಕಷ್ಟದ ಕೆಲಸ. ಹಾಗಾಗಿ ಬಿಳಿ ಬೂಟುಗಳನ್ನು ಸ್ವಚ್ಛಗೊಳಿಸಲು ಈ ಸಲಹೆ ಪಾಲಿಸಿ.
ಬಿಳಿ ಬೂಟುಗಳನ್ನು ಟ್ಯಾಪ್ ಅಡಿಯಲ್ಲಿ ಇರಿಸಿ ಸ್ವಚ್ಛಗೊಳಿಸಿ. ಇದರಿಂದ ಬೂಟು ಮೇಲಿನ ಕೊಳೆ ಬೇಗನೆ ಹೋಗುತ್ತದೆ.
ಬಿಸಿ ನೀರಿಗೆ ಡಿಟರ್ಜೆಂಟ್ ಅನ್ನು ಮಿಕ್ಸ್ ಮಾಡಿ ಶೂಗಳನ್ನು ನೆನೆಸಿಡಿ. ಇದರಿಂದ ಕೊಳೆ ಸುಲಭವಾಗಿ ಹೋಗುತ್ತದೆ. ನಂತರ ಅದನ್ನು ಬ್ರಷ್ ನಿಂದ ಉಜ್ಜಿ ತೊಳೆಯಿರಿ. ಇದರಿಂದ ಅದು ಬಹಳ ಬೇಗನೆ ಸ್ವಚ‍್ಛವಾಗಿ ಹೊಸದರಂತೆ ಹೊಳೆಯುತ್ತದೆ.
ಹುಡುಗಿಯರನ್ನು ಹೆಚ್ಚು ಆಕರ್ಷಿಸ್ತಾರಂತೆ ಈ ರಾಶಿ ಹುಡುಗರು
ಹಾಗೇ ಬಿಳಿ ಶೂಗೆ ವಿನೆಗರ್ ಮತ್ತು ಅಡುಗೆ ಸೋಡಾವನ್ನು ಸೇರಿಸಿ ಪೇಸ್ಟ್ ತಯಾರಿಸಿ ಶೂಗಳ ಮೇಲೆ ಹಚ್ಚಿ ಉಜ್ಜಿ ತೊಳೆದರೆ ಕಲೆಗಳು ಮಾಯವಾಗುತ್ತದೆ.
ಹಾಗೇ ಹಲ್ಲುಜ್ಜುವ ಟೂತ್ ಪೇಸ್ಟ್ ಅನ್ನು ಕೂಡ ಬಿಳಿ ಬೂಟುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಹಾಗಾಗಿ ಟೂತ್ ಪೇಸ್ಟ್ ಅನ್ನು ಬೂಟುಗಳ ಮೇಲೆ ಹಚ್ಚಿ ಚೆನ್ನಾಗಿ ಉಜ್ಜಿ ತೊಳೆಯಿರಿ.