ತಿಳಿ ಬಣ್ಣದ ಬಟ್ಟೆಗಳು ನಮ್ಮ ಅಂದವನ್ನು ದುಪ್ಪಟ್ಟು ಮಾಡುತ್ತವೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ತಿಳಿ ಬಣ್ಣದ ಬಟ್ಟೆಗೆ ಒಂದು ಚೂರು ಕಲೆಯಾದರೂ ಅದನ್ನು ಹೋಗಲಾಡಿಸುವುದು ಸವಾಲಿನ ಕೆಲಸ. ಅದಕ್ಕಾಗಿಯೇ ಅನೇಕರು ಗಾಢ ಬಣ್ಣದ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ.
ಬೇಸಿಗೆಯಲ್ಲಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು, ಇದರಿಂದ ಬಲವಾದ ಸೂರ್ಯನ ಬೆಳಕು ದೇಹದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ ಊಟ ಮಾಡುವಾಗ, ಅಡುಗೆ ಮಾಡುವಾಗ ಬಟ್ಟೆಯ ಮೇಲೆ ಅರಿಶಿನದ ಕಲೆಯಾಗುವ ಅಪಾಯವಿರುತ್ತದೆ.
ಅರಿಶಿನದ ಕಲೆಯನ್ನು ತೊಡೆದು ಹಾಕುವುದು ಬಹಳ ಕಷ್ಟ. ಬಿಳಿ ಕುರ್ತಾ, ಶರ್ಟ್ ಅಥವಾ ಪ್ಯಾಂಟ್ಗಳ ಮೇಲೆ ಅರಿಶಿನದ ಕಲೆಯಾದ್ರೆ ಅದನ್ನು ಹೋಗಲಾಡಿಸಲು ಕೆಲವೊಂದು ಟಿಪ್ಸ್ ಇಲ್ಲಿದೆ.
ನಿಂಬೆ : ಬಿಳಿ ಬಟ್ಟೆಯ ಮೇಲೆ ತರಕಾರಿ ಅಥವಾ ಅರಿಶಿನದ ಕಲೆಗಳಿದ್ದರೆ ಡಿಟರ್ಜೆಂಟ್ ಸಹಾಯದಿಂದ ಅದನ್ನು ತೆಗೆದು ಹಾಕುವುದು ಅಸಾಧ್ಯ. ಕಲೆ ಇರುವ ಜಾಗದಲ್ಲಿ ನಿಂಬೆ ಹಣ್ಣಿನಿಂದ ಉಜ್ಜಿ, ನಂತರ ನೀರಿನಿಂದ ತೊಳೆಯಿರಿ. ಹೀಗೆ ಮಾಡುವುದುರಿಂದ ಕಲೆ ಮಾಯವಾಗುತ್ತದೆ.
ತಣ್ಣೀರು : ಬಿಳಿ ಅಥವಾ ತಿಳಿ ಬಟ್ಟೆಯ ಮೇಲೆ ಅರಿಶಿನ ಕಲೆಗಳಿದ್ದರೆ ಮೊದಲು ಅದನ್ನು ಕೋಲ್ಡ್ ವಾಟರ್ನಲ್ಲಿ ಅದ್ದಿ. ಸ್ವಲ್ಪ ಸಮಯದ ಬಳಿಕ ಡಿಟರ್ಜೆಂಟ್ ಹಾಕಿ ತೊಳೆಯಿರಿ. ತಣ್ಣೀರಿನ ಪ್ರಭಾವದಿಂದ ಗಟ್ಟಿಯಾದ ಕಲೆಗಳು ಸಹ ಹಗುರವಾಗುತ್ತವೆ.
ಟೂತ್ಪೇಸ್ಟ್: ಹಲ್ಲುಗಳನ್ನು ಸ್ವಚ್ಛಗೊಳಿಸಲು ನಾವು ಬಳಸುವ ಟೂತ್ ಪೇಸ್ಟ್ ಕಠಿಣ ಕಲೆಗಳನ್ನೂ ತೊಡೆದು ಹಾಕಬಲ್ಲದು. ಟೂತ್ಪೇಸ್ಟ್ ಅನ್ನು ಕಲೆ ಇರುವ ಜಾಗಕ್ಕೆ ಉಜ್ಜಿ ಸ್ವಲ್ಪ ಹೊತ್ತು ಒಣಗಲು ಬಿಡಿ. ಕೊನೆಗೆ ಶುದ್ಧ ನೀರಿನಿಂದ ತೊಳೆಯಿರಿ.
ವಿನೆಗರ್: ವೈಟ್ ವಿನೆಗರ್ ಅನ್ನು ಆಹಾರದ ರುಚಿ ಹೆಚ್ಚಿಸಲು ಬಳಸಲಾಗುತ್ತದೆ. ಇದನ್ನು ನೀವು ಬಟ್ಟೆಗಳನ್ನು ಸ್ವಚ್ಛಗೊಳಿಸಲು ಸಹ ಬಳಸಬಹುದು. ವಿನೆಗರ್ ಅನ್ನು ಲಿಕ್ವಿಡ್ ಸೋಪಿನೊಂದಿಗೆ ಬೆರೆಸಿ ಅರಿಶಿನದ ಕಲೆಯ ಮೇಲೆ ಹಚ್ಚಿರಿ. ಸುಮಾರು ಅರ್ಧ ಘಂಟೆಯವರೆಗೆ ಒಣಗಲು ಬಿಡಿ. ನಂತರ ಅದನ್ನು ತೊಳೆಯಿರಿ.