ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಇದೇ ಪ್ರಥಮವಾಗಿ ಹೊಸ ಬಗೆಯ ಕೀಟ ಪತ್ತೆಯಾಗಿದ್ದು, ಇದು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಂಡು ಬಂದಿದೆ ಎಂದು ಹೇಳಲಾಗಿದೆ.
ಕೊಡಗಿನ ಏಟ್ರಿ ಸಂಸ್ಥೆ ಈ ಹೊಸ ಬಗೆಯ ಕೀಟವನ್ನು ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆ ಮಾಡಿದ್ದು, ಪರಿಸರ ವ್ಯವಸ್ಥೆ ಕುರಿತ ಸಂಶೋಧನೆಯಲ್ಲಿ ಈ ಸಂಸ್ಥೆ ತೊಡಗಿಸಿಕೊಂಡಿದೆ.
ಬಿಳಿಗಿರಿರಂಗನ ಬೆಟ್ಟದಲ್ಲಿ ಈ ಕೀಟ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಲಿಗರನ್ನು ಪ್ರತಿನಿಧಿಸುವ ಹೆಸರನ್ನೇ (soliga ecarinata) ಇದಕ್ಕೆ ಇಡಲಾಗಿದೆ.
ನಾಗಾಲ್ಯಾಂಡ್ ನಲ್ಲಿ 15 ವರ್ಷಗಳನ್ನು ಹಿಂದೆ ಈ ಕೀಟ ಕಂಡು ಬಂದಿದ್ದು, ಅದಾದ ಬಳಿಕ ದಕ್ಷಿಣ ಭಾರತದಲ್ಲಿ ಇದೆ ಪ್ರಥಮವಾಗಿ ಬಿಳಿಗಿರಿ ರಂಗನ ಬೆಟ್ಟದಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.