ತುಟಿ ಒಣಗಿ ಹೊಳಪು ಕಳೆದುಕೊಂಡಿದ್ದರೆ ಮುಖದ ಸೌಂದರ್ಯ ಎಷ್ಟೇ ಆಕರ್ಷಕವಾಗಿದ್ದರೂ ಅದು ಕಳೆಗುಂದುತ್ತದೆ. ಅಂದ ಹಾಗೆ ಅಡುಗೆ ಮನೆಯೊಳಗಿನ ಕೆಲವು ಸಾಮಗ್ರಿಗಳಿಂದ ಬಿರುಕು ತುಟಿಯನ್ನು ಸುಂದರವಾಗಿಟ್ಟು ಕೊಳ್ಳಲು ಸುಲಭ ಮಾರ್ಗ ಇದೆ.
ಲೆಮನ್ ಮಸಾಜ್ :
ನಿಂಬೆ ಹಣ್ಣನ್ನು ಎರಡು ಭಾಗ ಮಾಡಿ, ಕೊಂಚ ಪುಡಿ ಸಕ್ಕರೆಯನ್ನು ಉದುರಿಸಿ. ಇದನ್ನು ತುಟಿಗಳ ಮೇಲೆ ಸವರಿ, ನಿಧಾನವಾಗಿ ಮಸಾಜ್ ಮಾಡಿ. ನಿಂಬೆ ರಸ ಉತ್ತಮ ಬ್ಲೀಚಿಂಗ್ ಏಜೆಂಟ್ ತರಹ ಕೆಲಸ ಮಾಡುತ್ತದೆ. ಉದುರಿಸಿದ ಸಕ್ಕರೆಯು ಡೆಡ್ ಸ್ಕಿನ್ ಸೆಲ್ಸ್ ತೆಗೆಯುತ್ತದೆ. ತುಟಿ ಆಕರ್ಷಕವಾಗಿ ಕಾಣುತ್ತದೆ.
ಹಾಲಿನೊಂದಿಗೆ ಅರಿಶಿಣ :
ಅರಿಶಿಣವನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ತುಟಿಗೆ ಹಚ್ಚಿ. ಈ ರೀತಿ ಪ್ರತಿದಿನ ಹದಿನೈದು ದಿನಗಳವರೆಗೆ ಮಾಡಿದರೆ, ತುಟಿಯ ಬಣ್ಣ ತಿಳಿಯಾಗುವುದಲ್ಲದೇ ಆಕರ್ಷಕವಾಗಿ ಕಾಣುತ್ತವೆ.
ಅಲೋವೆರಾ ಮತ್ತು ಜೇನುತುಪ್ಪ :
ಅಲೋವೆರಾವನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ, ತುಟಿಗಳಿಗೆ ಹಚ್ಚುತ್ತಾ ಬಂದಲ್ಲಿ, ತುಟಿಗಳು ಬಿರುಕು ಬಿಡುವುದಿಲ್ಲ.
ತುಪ್ಪ, ಹಾಲಿನ ಕೆನೆ ಮತ್ತು ಜೇನು ತುಪ್ಪ :
ಈ ಮೂರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ತುಟಿಯನ್ನು ಸ್ವಚ್ಛಗೊಳಿಸಿದರೆ ಮೃದುವಾದ ತುಟಿ ನಿಮ್ಮದಾಗುತ್ತೆ. ದಿನಕ್ಕೆ ಎರಡು ಬಾರಿ ಈ ರೀತಿ ಮಾಡಿದರೆ ಬಿರುಕು ಬಿಟ್ಟ ತುಟಿ ಸಾಫ್ಟ್ ಆಗುತ್ತೆ.