ಬಿಪಿ ಸಮಸ್ಯೆ ನಿಮ್ಮನ್ನು ಅತಿಯಾಗಿ ಕಾಡುತ್ತಿದೆಯೇ, ಕಚೇರಿ ಕಿರಿಕಿರಿ, ಮನೆಯ ಜವಾಬ್ದಾರಿ ನಿಮ್ಮ ರಕ್ತದೊತ್ತಡವನ್ನು ವಿಪರೀತ ಹೆಚ್ಚಿಸಿದೆಯೇ. ಇದಕ್ಕೆ ಬೆಳ್ಳುಳ್ಳಿ ಅತ್ಯುತ್ತಮ ಮದ್ದಾಗಬಲ್ಲದು.
ಅತಿಯಾದ ರಕ್ತದೊತ್ತಡ ಹಲವು ಹೃದಯ ಸಂಬಂಧಿ ಕಾಯಿಲೆಗಳನ್ನು ಹುಟ್ಟುಹಾಕಬಹುದು. ಇದಕ್ಕೆ ಮೊದಲೇ ಮುಂಜಾಗ್ರತೆ ವಹಿಸುವುದು ಬಹಳ ಮುಖ್ಯ.
ಬೆಳ್ಳುಳ್ಳಿ ಬಿಪಿ ನಿಯಂತ್ರಿಸುವುದು ಮಾತ್ರವಲ್ಲ ಹೃದಯದ ಆರೋಗ್ಯಕ್ಕೂ ಒಳ್ಳೆಯದು.
ನೀವು ಬೆಳಿಗ್ಗೆ ಸಲಾಡ್ ಸೇವಿಸುವವರಾದರೆ ಬೆಳ್ಳುಳ್ಳಿಯನ್ನು ಸಣ್ಣದಾಗಿ ಹೆಚ್ಚಿ. ಇದನ್ನು ಸಲಾಡ್ ಗೆ ಸೇರಿಸಿ, ಇದು ನಿಮ್ಮ ಸಲಾಡ್ ನ ರುಚಿಯನ್ನು ಹೆಚ್ಚಿಸುತ್ತದೆ.
ಸೂಪ್ ಜೊತೆಗೂ ಇದನ್ನು ಸೇವಿಸಬಹುದು. ಸಣ್ಣದಾಗಿ ಹೆಚ್ಚಿಕೊಂಡ ಬೆಳ್ಳುಳ್ಳಿಯನ್ನು ಜಜ್ಜಿ. ಸೂಪ್ ಗೆ ಸೇರಿಸಿ ಕುಡಿಯಿರಿ. ಉಪ್ಪು ಸಾಧ್ಯವಾದಷ್ಟು ಕಡಿಮೆ ಬಳಸಿ. ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಜಜ್ಜಿ ಹಾಕಿ ನೀರು ಕುಡಿಯಿರಿ. ಬೆಳ್ಳುಳ್ಳಿ ಟೀ ತಯಾರಿಸಿ ಕುಡಿಯಿರಿ. ಕೆಮ್ಮು ಶೀತಕ್ಕೂ ಇದು ಪರಿಣಾಮಕಾರಿ ಔಷಧ.
ಬೆಳ್ಳುಳ್ಳಿಯನ್ನು ರೋಸ್ಟ್ ಮಾಡಿ, ಯಾವುದಾದರೂ ಸಾಂಬಾರು, ಗ್ರೇವಿ ಪಲ್ಯಕ್ಕೂ ಜೊತೆಯಾಗಿ ಸೇರಿಸಬಹುದು.