ಮುಂಬೈ: ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರು(ಬಿಪಿಎಲ್), ಸ್ತ್ರೀಸ್ವಸಹಾಯ ಗುಂಪುಗಳ ಸದಸ್ಯರು ಸೇರಿದಂತೆ 60 ಲಕ್ಷ ಗ್ರಾಮೀಣ ಮಹಿಳೆಯರಿಗೆ 10 ಸ್ಯಾನಿಟರಿ ನ್ಯಾಪ್ ಕಿನ್ ಗಳನ್ನು ಕೇವಲ 1 ರೂಪಾಯಿಗೆ ಖರೀದಿಸುವ ಯೋಜನೆಯನ್ನು ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿದೆ.
ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರಿಫ್ ಅವರು ಈ ಯೋಜನೆಯನ್ನು ಆಗಸ್ಟ್ 15, 2022 ರಿಂದ ಜಾರಿಗೊಳಿಸಲಾಗುವುದು. ಗ್ರಾಮೀಣ ಪ್ರದೇಶದ ಸುಮಾರು 60 ಲಕ್ಷ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ಮಹಾರಾಷ್ಟ್ರದಲ್ಲಿ ಆರೋಗ್ಯ ಇಲಾಖೆ ಜಾರಿಗೆ ತಂದ ಮುಟ್ಟಿನ ನೈರ್ಮಲ್ಯ ಸಂರಕ್ಷಣಾ ಯೋಜನೆಯಡಿ, 19 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಆರು ನ್ಯಾಪ್ಕಿನ್ ಗಳ ಕಿಟ್ ಗಳನ್ನು 6 ರೂ.ಗೆ ನೀಡಲಾಗುತ್ತದೆ. ಆದರೆ, ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ಮಹಿಳೆಯರಿಗೆ ಇದರ ಪ್ರಯೋಜನ ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಮಹಿಳೆಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ನೀಡಲು ಕ್ರಮ ಕೈಗೊಳ್ಳಲಾಗಿದೆ.