
ನಮ್ಮ ಪ್ರೀತಿ ಪಾತ್ರರನ್ನು ಭೇಟಿಯಾಗಿ ಬಹಳ ಸಮಯವಾಗಿದ್ದರೆ, ಅವರನ್ನು ನೋಡಲು ಬಹಳ ಉತ್ಸುಕರಾಗಿರುತ್ತೇವೆ. ಸಮಯವನ್ನು ಕಾಯಲಾಗದೆ ಚಡಪಡಿಸುತ್ತಿರುತ್ತೇವೆ. ಇದೀಗ ಇಂಥದ್ದೇ ಒಂದು ವಿಡಿಯೋವೊಂದು ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.
ಹೌದು, ಜೋಡಿಯೊಂದು ವಿಮಾನ ನಿಲ್ದಾಣದಲ್ಲಿ ಅಪರೂಪದ ಭೇಟಿಯಾಗಿದ್ದು, ಅವರಿಬ್ಬರ ಮುಖಾಮುಖಿಯು ಮುಜುಗರದ ಸಂಗತಿಯಾಗಿದೆ. ಯುವತಿಯೊಬ್ಬಳು ತನ್ನ ಗೆಳೆಯನನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಓಡೋಡಿ ಬಂದಿದ್ದಾಳೆ.
ಒಬ್ಬ ಹುಡುಗಿ ತನ್ನ ಸಂಗಾತಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಲು ಬಂದಿದ್ದಾಳೆ ಮತ್ತು ಅವಳು ಅವನನ್ನು ಅಪ್ಪುಗೆಯೊಂದಿಗೆ ಸ್ವಾಗತಿಸಲು ಅವನ ಕಡೆಗೆ ಓಡಿಹೋದ್ದಾಳೆ. ಆದರೆ, ಮುಂದೆ ಏನಾಗಬಹುದು ಎಂಬುದನ್ನು ಅವರು ಬಹುಶಃ ಊಹಿಸಿರಲಿಕ್ಕಿಲ್ಲ. ಇಬ್ಬರೂ ಅಪ್ಪಿಕೊಳ್ಳಲು ಹಾರಿದಾಗ ಜಾರಿ ಕೆಳಗೆ ಬಿದ್ದಿದ್ದಾರೆ. ನಂತರ ಏನೂ ಆಗದವರಂತೆ ಎದ್ದು ಮತ್ತೆ ಖುಷಿಯಿಂದ ಅಪ್ಪಿ ಕುಣಿದಾಡಿದ್ದಾರೆ.
ಟ್ವಿಟ್ಟರ್ ಬಳಕೆದಾರ ಹರ್‌ಪ್ರೀತ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ತನ್ನ ಗೆಳೆಯ ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿರುವುದನ್ನು ನೋಡಿದ ಯುವತಿ ಆತನ ಕಡೆಗೆ ಓಡುತ್ತಿರುವುದನ್ನು ಕಾಣಬಹುದು. ಈ ವೇಳೆ ಇಬ್ಬರೂ ಪರಸ್ಪರ ಅಪ್ಪಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಇಬ್ಬರೂ ಕೆಳಗೆ ಬಿದ್ದಿದ್ದಾರೆ.
ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಪ್ರೀತಿಯಲ್ಲಿ ಬೀಳುವುದೆಂದರೆ ಇದೇ ಇರಬೇಕು ಎಂದು ನೆಟ್ಟಿಗರು ವಿನೋದಮಯವಾಗಿ ಪ್ರತಿಕ್ರಿಯಿಸಿದ್ದಾರೆ.
