ಸೋಶಿಯಲ್ ಮೀಡಿಯಾದಲ್ಲಿ ಉಲ್ಲಾಸದ ವಿಡಿಯೋವೊಂದು ವೈರಲ್ ಆಗುತ್ತಿದೆ. ನೀವು ಈ ವಿಡಿಯೋ ನೋಡಿದ್ರೆ, ಖಂಡಿತಾ ಬಿದ್ದು ಬಿದ್ದು ನಗ್ತೀರಾ..!
ವ್ಯಕ್ತಿಯೊಬ್ಬರು ಕಚೇರಿಯಲ್ಲಿ ಕುರ್ಚಿಯ ಮೇಲೆ ಕುಳಿತು ತನ್ನ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಒಬ್ಬಳು ಯುವತಿ ಬಾಗಿಲಿನಿಂದ ಹೊರಹೋಗಲು ಪ್ರಯತ್ನಿಸಿದ್ದಾಳೆ. ತನ್ನ ಕೈತುಂಬಾ ವಸ್ತುಗಳನ್ನು ಹಿಡಿದಿದ್ದರಿಂದ ಆಕೆಗೆ ಬಾಗಿಲನ್ನು ತೆಗೆಯಲು ಸಾಧ್ಯವಾಗಿಲ್ಲ.
ಯುವತಿಯ ಪರದಾಟ ನೋಡಿದ ಆ ವ್ಯಕ್ತಿಯು ಎದ್ದು ಆಕೆ ಹೊರಹೋಗುವವರೆಗೂ ಸಂಭಾವಿತನಂತೆ ಬಾಗಿಲನ್ನು ಹಿಡಿದು ಅವಳಿಗೆ ಸಹಾಯ ಮಾಡುತ್ತಾನೆ. ಅವನು ಎದ್ದು ನಿಂತಾಗ ಆತ ಕುಳಿತಿದ್ದ ಕುರ್ಚಿ ಹಿಂದೆ ಸರಿಯುವುದನ್ನು ಗಮನಿಸಲಿಲ್ಲ. ಯುವತಿ ಹೋದ ಬಳಿಕ ಆತ ತನ್ನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದ್ದಾನೆ. ಕುರ್ಚಿ ಇದೆಯೋ ಇಲ್ಲವೋ ಎಂಬುದನ್ನು ನೋಡದೆ ಕುಳಿತುಕೊಳ್ಳಲು ಹೋಗಿ ದಢಾರನೇ ಕೆಳಗೆ ಬಿದ್ದು ಬಿಟ್ಟಿದ್ದಾನೆ. ಬಿದ್ದ ರಭಸಕ್ಕೆ ಆತ ಕೆಲವು ಸೆಕೆಂಡುಗಳ ಕಾಲ ಅಲ್ಲಿಯೇ ಮಲಗುತ್ತಾನೆ.
ಈ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇನ್ಸ್ಟಾಗ್ರಾಂ ಬಳಕೆದಾರರು ನಗುವ ಎಮೋಜಿಗಳೊಂದಿಗೆ ಕಾಮೆಂಟ್‌ಗಳನ್ನು ತುಂಬಿದ್ದಾರೆ. ಸಾವಿರಾರು ವೀಕ್ಷಣೆಗಳೊಂದಿಗೆ ಈ ವಿಡಿಯೋ ವೈರಲ್ ಆಗಿದೆ. ಕೆಲವು ನೆಟ್ಟಿಗರು ಆತನ ಪರಿಪಾಟಲು ನೋಡಿ ಬೇಸರಪಟ್ಟುಕೊಂಡಿದ್ದಾರೆ.