ಗುಜರಾತ್ ನಲ್ಲಿ 2ನೇ ಹಂತದ ಚುನಾವಣೆ ನಡೀತಿದ್ದು, ಪ್ರಧಾನಿ ಮೋದಿ ತವರು ರಾಜ್ಯದಲ್ಲಿ ಮತದಾನ ಚಲಾಯಿಸಿದರು. ಈ ವೇಳೆ ಅವರು ತಮ್ಮ ಸೋದರ ಸೋಮಭಾಯಿ ಮೋದಿಯವರನ್ನು ಭೇಟಿಯಾದರು.
ಭೇಟಿಯ ವೇಳೆ ಪ್ರಧಾನಿ ಮೋದಿಗೆ ಅವರ ಸೋದರ ಸೋಮಭಾಯಿ ಸಲಹೆಯೊಂದನ್ನ ನೀಡಿದ್ದಾರೆ. ಮೋದಿ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಭಾಯಿ ಮೋದಿ ಭಾವುಕತೆ ವ್ಯಕ್ತಪಡಿಸಿದರು.
2014 ರ ನಂತರ ಕೇಂದ್ರವು ಮಾಡಿದ ಕೆಲಸವನ್ನು ಜನರು ನಿರ್ಲಕ್ಷಿಸಲು ಸಾಧ್ಯವಿಲ್ಲ. ನೀನು ಸ್ವಲ್ಪ ವಿಶ್ರಾಂತಿ ತೆಗೆದುಕೊ ಎಂದು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾಗಿ ಭಾವುಕರಾದರು.
ಸೋಮವಾರ ಗುಜರಾತ್ನ ಅಹಮದಾಬಾದ್ನಲ್ಲಿ ಪ್ರಧಾನಿ ಮೋದಿ ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದರು.