
ಒಂದರ ಮೇಲೊಂದು ಸಿನಿಮಾಗಳಲ್ಲಿ ಬಿಜಿಯಾಗಿರುವ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಗಣ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಿನ್ನೆ ಬಿಡುಗಡೆ ಮಾಡಲಾಗಿದ್ದು ಪ್ರಜ್ವಲ್ ದೇವರಾಜ್ ಮತ್ತೊಮ್ಮೆ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಹರಿಪ್ರಸಾದ್ ಜಕ್ಕ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಸೇರಿದಂತೆ ಬಹುಭಾಷಾ ನಟಿ ವೇದಿಕ, ಕೃಷಿ ತಾಪಂಡ, ವಿಶಾಲ್ ಹೆಗ್ಡೆ, ಶಿವರಾಜ್ ಕೆ ಆರ್ ಪೇಟೆ ತೆರೆ ಹಂಚಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದು, ಚೆರ್ರಿ ಕ್ರಿಯೇಷನ್ಸ್ ಬ್ಯಾನರ್ ನಡಿ ಪಾರ್ತು ಬಂಡವಾಳ ಹೂಡಿದ್ದಾರೆ.
ಈ ಸಿನಿಮಾಗಾಗಿ ಪ್ರಜ್ವಲ್ ದೇವರಾಜ್ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ ಎಂದು ನಿರ್ದೇಶಕರು ಇತ್ತೀಚಿಗಷ್ಟೇ ವಾಹಿನಿಯಲ್ಲಿ ಹಂಚಿಕೊಂಡಿದ್ದರು ಪ್ರಜ್ವಲ್ ದೇವರಾಜ್ ಅವರನ್ನು ಮತ್ತೊಮ್ಮೆ ತೆರೆ ಮೇಲೆ ವೀಕ್ಷಿಸಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
