ಬೆಂಗಳೂರು: ಬಿಟ್ ಕಾಯಿನ್ ದಂಧೆಯಲ್ಲಿ ಆಡಳಿತ ಪಕ್ಷದವರ ಕೈವಾಡವಿದೆ. ಆರೋಪಿಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ ಎಂಬ ವಿಪಕ್ಷ ನಾಯಕರ ಆರೋಪಕ್ಕೆ ಕಿಡಿಕಾರಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ತನಿಖೆ ಬಳಿಕ ಇದರ ಹಿಂದಿರುವವರ ಕೈವಾಡದ ಬಗ್ಗೆ ಗೊತ್ತಾಗಲಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಬಿಟ್ ಕಾಯಿನ್ ದಂಧೆ ಬಗ್ಗೆ ನಾನು ಮಾತನಾಡಲ್ಲ. ಪ್ರಭಾವಿಗಳಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ತನಿಖೆ ಬಳಿಕ ಯಾರಿದ್ದಾರೆಂದು ಬಹಿರಂಗವಾಗಲಿದೆ. ದಂಧೆಯಲ್ಲಿ ಸಿಎಂ ಮಗನಿದ್ದಾರಾ? ಸಚಿವರ ಮಗನಿದ್ದಾರಾ? ಇದೆಲ್ಲ ಸಾರ್ವಜನಿಕ ಚರ್ಚೆಯಾದರೆ ಇದಕ್ಕೆಲ್ಲ ನಾನ್ಯಾಕೆ ಉತ್ತರಿಸಲಿ? ಎಂದರು.
ತುಳಸಿ ಗಿಡ ಮನೆ ಮುಂದೆ ನೆಟ್ಟರೆ ಏನೆಲ್ಲಾ ಲಾಭವಿದೆ ಗೊತ್ತಾ…..?
ಇದೇ ವೇಳೆ ಮೇಕೆದಾಟು ಯೋಜನೆ ವಿಚಾರವಾಗಿ ಮಾತನಾಡಿದ ಸಚಿವರು, ಈ ಯೋಜನೆ ರಾಜ್ಯದ ಪ್ರತಿಯೊಬ್ಬರ ಅಪೇಕ್ಷೆ. ಕಾಂಗ್ರೆಸ್ ನಾಯಕರಿಗೆ ಈಗೇಕೆ ಮೇಕೆದಾಟು ನೆನಪಿಗೆ ಬಂತು? ಅವರ ಸರ್ಕಾರ ಇದ್ದಾಗ ಈ ಬಗ್ಗೆ ಯಾಕೆ ಯಾವುದೇ ಮಾತನಾಡಲಿಲ್ಲ? ಸುಮ್ಮನೇ ರಾಜಕೀಯ ಮಾಡಬೇಕು ಎಂದು ಮಾತನಾಡುತ್ತಿದ್ದಾರೆ ಅಷ್ಟೆ. ಆದರೆ ನಾವು ಮೇಕೆದಾಟು ಯೋಜನೆ ಮಾಡಲ್ಲ ಎಂದು ಹೇಳಿಲ್ಲ. ಕಾನೂನು ಬದ್ಧವಾಗಿ ಯೋಜನೆ ಜಾರಿಗೆ ತೀರ್ಮಾನಿಸುತ್ತೇವೆ ಎಂದು ಹೇಳಿದರು.