ಕೆಲವರಿಗೆ ಬಿಟ್ರೂಟ್ ಸಾರು, ಪಲ್ಯವೆಂದರೆ ಮುಖ ತಿರುಗಿಸುತ್ತಾರೆ. ಮಕ್ಕಳಂತೂ ಬಿಟ್ರೂಟ್ ನೋಡಿದರೆ ಬೇಡ ಎಂದು ಹಟ ಹಿಡಿಯುತ್ತಾರೆ. ಆದರೆ ಬಿಟ್ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಿಟ್ರೂಟ್ ನ ಸಾರು, ಪಲ್ಯ ತಿನ್ನದವರಿಗೆ ಇದರಿಂದ ಚಟ್ನಿ ಮಾಡಿ ಕೊಡಿ. ಇದರ ರುಚಿ ನೋಡಿ ಪದೇ ಪದೇ ಕೇಳುತ್ತಾರೆ.
ಬೇಕಾಗುವ ಸಾಮಗ್ರಿಗಳು:
ಬಿಟ್ರೂಟ್ – 1, ಒಣಮೆಣಸು – 5, ಈರುಳ್ಳಿ – 1, ಹುಣಸೆಹಣ್ಣು – ಸಣ್ಣ ತುಂಡು, ಕೊತ್ತಂಬರಿ ಸೊಪ್ಪು – ಸ್ವಲ್ಪ, ¼ ಟೀ ಸ್ಪೂನ್ – ಜೀರಿಗೆ, ¼ ಟೀ ಸ್ಪೂನ್ – ಸಾಸಿವೆ, ಕರಿಬೇವು – 5 ಎಸಳು, ಉದ್ದೀನಬೇಳೆ – 1 ಟೀ ಸ್ಪೂನ್, ಕಡಲೆಬೇಳೆ – 1 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ¼ ಕಪ್ – ತೆಂಗಿನಕಾಯಿ ತುರಿ, ಎಣ್ಣೆ – ಸ್ವಲ್ಪ,
ಮಾಡುವ ವಿಧಾನ:
ಮೊದಲಿಗೆ ಬಿಟ್ರೂಟ್ ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ. ಈರುಳ್ಳಿಯನ್ನು ಕತ್ತರಿಸಿಕೊಳ್ಳಿ. ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಒಣಮೆಣಸು, ಈರುಳ್ಳಿ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ನಂತರ ಬಿಟ್ರೂಟ್ ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದು 4 ನಿಮಿಷಗಳ ಕಾಲ ಬೇಯಲಿ, ನಂತರ ಕೊತ್ತಂಬರಿಸೊಪ್ಪು, ತೆಂಗಿನಕಾಯಿ ತುರಿ, ಹುಣಸೆಹಣ್ಣು ಸೇರಿಸಿ ಸ್ವಲ್ಪ ಕೈಯಾಡಿಸಿ. ಇದು ತಣ್ಣಗಾದ ಮೇಲೆ ಒಂದು ಮಿಕ್ಸಿಜಾರಿಗೆ ರುಬ್ಬಿಕೊಳ್ಳಿ. ಇದನ್ನು ಒಂದು ಬೌಲ್ ಗೆ ತೆಗೆದುಕೊಂಡು ಅದಕ್ಕೆ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಬಿಸಿ ಅನ್ನದ ಜತೆ ಚೆನ್ನಾಗಿರುತ್ತದೆ.