ಬೆಂಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಸಂದದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಹೋಟೆಲ್ ಒಂದಕ್ಕೆ ದೋಸೆ ತಿನ್ನಲು ಹೋಗಿದ್ದು, ಸಾಕಷ್ಟು ಟ್ರೋಲ್ ಆಗಿತ್ತು. ಪ್ರತಿಪಕ್ಷ ಕಾಂಗ್ರೆಸ್ ಈ ವಿಷಯವನ್ನು ಹಿಡಿದುಕೊಂಡು ತೇಜಸ್ವಿ ಸೂರ್ಯ ಅವರಿಗೆ ಟಾಂಗ್ ನೀಡುತ್ತಿದೆ.
ಕಾಂಗ್ರೆಸ್ ಕಾರ್ಯಕರ್ತರು ತೇಜಸ್ವಿ ಸೂರ್ಯ ಅವರಿಗೆ ಮಸಾಲೆ ದೋಸೆ ಪಾರ್ಸೆಲ್ ಕಳುಹಿಸಿಕೊಡುವುದಾಗಿ ಹೇಳಿದ್ದು, ಬಳಿಕ ಈ ಕುರಿತಂತೆ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ ಒಂದು ದಿನ ಕಳೆದರೂ ತಮಗೆ ದೋಸೆ ತಲುಪಿಲ್ಲ ಎಂದಿದ್ದರು. ಇದಾದ ಬಳಿಕ ಮತ್ತೊಮ್ಮೆ ದೋಸೆ ಕಳುಹಿಸಿಕೊಡಲಾಗಿತ್ತು.
ಇದೀಗ ಕಾಂಗ್ರೆಸ್, ಬೆಳ್ಳಂದೂರಿನಲ್ಲಿ ಜನ ಮುಳುಗಿದರೆ ನಾನೇನು ಮಾಡಲಿ ಎನ್ನುವ ತೇಜಸ್ವಿ ಸೂರ್ಯ ಕೆಲಸಕ್ಕೆ ಬಾರದ ಸಂಸದ. ಅವರು ನಿರುದ್ಯೋಗಿಯಾಗಿದ್ದಾರೆ. ಕಾಂಗ್ರೆಸ್ ಕಳಿಸಿದ ದೋಸೆಗಾಗಿ 24ಗಂಟೆ ಬಾಯಲ್ಲಿ ನೀರು ಸುರಿಸಿಕೊಂಡು ಕಾಯುವಷ್ಟು ಒಬ್ಬ ಸಂಸದನಿಗೆ ಪುರಸೊತ್ತಿದೆ ಎಂದಾದ್ರೆ ಅವರು ದೋಸೆ ತಿನ್ನಲಷ್ಟೇ ಲಾಯಕ್ಕು. ಬಿಟ್ಟಿ ತಿನ್ನೋದಸ್ಟೇ ಬಿಜೆಪಿ ಕಾಯಕವೇ!? ಎಂದು ಟ್ವೀಟ್ ಮೂಲಕ ಕಾಲೆಳೆದಿದೆ.