alex Certify ಬಿಜೆಪಿ ಮಣಿಸಲು ಒಂದಾಗುತ್ತಿದ್ದರಾ ಪ್ರತಿಪಕ್ಷಗಳ ನಾಯಕರು…? ಭಾರೀ ಕುತೂಹಲ ಮೂಡಿಸಿದ ಕೆ.ಸಿ.ಆರ್.​ ಮುಂಬೈ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ಮಣಿಸಲು ಒಂದಾಗುತ್ತಿದ್ದರಾ ಪ್ರತಿಪಕ್ಷಗಳ ನಾಯಕರು…? ಭಾರೀ ಕುತೂಹಲ ಮೂಡಿಸಿದ ಕೆ.ಸಿ.ಆರ್.​ ಮುಂಬೈ ಭೇಟಿ

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ​​​ ರಾವ್​ ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆಯವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಅಲ್ಲದೇ ಇದಾದ ಬಳಿಕ ಎನ್​ಸಿಪಿ ನಾಯಕ ಶರದ್​ ಪವಾರ್​ ಹಾಗೂ ನಟ ಮತ್ತು ರಾಜಕಾರಣಿ ಪ್ರಕಾಶ್​ ರೈ ಅವರನ್ನೂ ಭೇಟಿಯಾಗಿದ್ದು‌, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ವಿರುದ್ಧ ಪ್ರಾದೇಶಿಕ ಪಕ್ಷಗಳು ಒಗ್ಗೂಡುತ್ತಿರುವ ಮುನ್ಸೂಚನೆಯನ್ನು ನೀಡಿದೆ.

ಬಹುಭಾಷಾ ನಟ ಪ್ರಕಾಶ್​ ರೈ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ಕೇಂದ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಇದಾದ ಬಳಿಕ ಚಲನಚಿತ್ರ ಕಲಾವಿದರ ಸಂಘದ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋಲನ್ನುಂಡಿದ್ದರು. ಇದೀಗ ಕೆಸಿಆರ್​ ಜೊತೆಯಲ್ಲಿ ಪ್ರಕಾಶ್​ ರಾಜ್​ ಕಾಣಿಸಿಕೊಂಡಿರುವುದು ಅನೇಕರ ಆಶ್ಚರ್ಯಕ್ಕೆ ಕಾರಣವಾಗಿದೆ.

ಕೆ.ಸಿ. ರಾವ್​ ಹಾಗೂ ಪ್ರಕಾಶ್​ ರೈ ಇಬ್ಬರೂ ಮುಂಬೈನಲ್ಲಿ ಭೇಟಿಯಾಗಿದ್ದು ಮೊದಲ ಭೇಟಿಯಲ್ಲಿ ಇಬ್ಬರೂ ಉತ್ತಮ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯದ ವಿಚಾರಗಳಲ್ಲಿ ಪ್ರಧಾನ ಮೋದಿಯ ಆಡಳಿತ ವೈಖರಿ ಹಾಗೂ ಬಿಜೆಪಿ ತತ್ವ ಸಿದ್ಧಾಂತಗಳ ವಿರೋಧಿಯಾಗಿರುವ ಪ್ರಕಾಶ್​ ರೈ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಇದೀಗ ಕೆಸಿಆರ್​ ಜೊತೆಯಲ್ಲಿ ಪ್ರಕಾಶ್​ ರೈ ಕಾಣಿಸಿಕೊಂಡಿರುವುದು ಬಿಜೆಪಿ ಹಾಗೂ ಕಾಂಗ್ರೆಸ್​ ವಿರುದ್ಧ ದೇಶದಲ್ಲಿ ಅಸಾಧಾರಣ ರಾಜಕೀಯ ಮೈತ್ರಿಯೊಂದು ಮೂಡಬಹುದೇ ಎಂಬ ಕುತೂಹಲವನ್ನು ಹುಟ್ಟು ಹಾಕಿದೆ. ಈ ಬಹುದೊಡ್ಡ ಮೈತ್ರಿಯಲ್ಲಿ ಕೆಸಿಆರ್​ ಮಹತ್ವದ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ.

ಸಿಎಂ ಕೆಸಿಆರ್ ಶೀಘ್ರದಲ್ಲೇ ಎಂಕೆ ಸ್ಟಾಲಿನ್ ಮತ್ತು ಎಚ್ ಡಿ ದೇವೇಗೌಡರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಈ ಎರಡೂ ಭೇಟಿಯ ಸಂದರ್ಭದಲ್ಲಿ ಪ್ರಕಾಶ್​ ರೈ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ. 2018ರ ಏಪ್ರಿಲ್‌ನಲ್ಲಿ ಫೆಡರಲ್ ಫ್ರಂಟ್ ರಚನೆಯ ಭಾಗವಾಗಿ ಕೆಸಿಆರ್, ದೇವೇಗೌಡರನ್ನು ಭೇಟಿ ಮಾಡಲು ಹೋದಾಗಲೂ ಪ್ರಕಾಶ್ ರೈ, ಕೆಸಿಆರ್ ಜೊತೆಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...