ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ನಿಲ್ಲಲು ಎಎಪಿ ಪಕ್ಷದ ಆಕಾಂಕ್ಷಿಗಳಿಂದ 80 ಲಕ್ಷ ಕೇಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಕುಟುಕು ಕಾರ್ಯಾಚರಣೆಯ ವಿಡಿಯೊವನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಬಿಜೆಪಿಯು ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ, ಕುಟುಕು ಕಾರ್ಯಾಚರಣೆಯ ವಿಡಿಯೊವನ್ನು ಅಪ್‌ಲೋಡ್ ಮಾಡಿದೆ, ಮುಂಬರುವ 2022 ರ ಎಂಸಿಡಿ ಚುನಾವಣೆಗೆ ಪಕ್ಷದಿಂದ ಟಿಕೆಟ್ ಪಡೆಯಲು ಎಎಪಿ ಕಾರ್ಯಕರ್ತರಿಂದ ನಗದು ಹಣವನ್ನು ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋದಲ್ಲಿ ಬಿಂದು ಎಂಬ ಆಪ್ ಕಾರ್ಯಕರ್ತರು ಕೇಂದ್ರಬಿಂದುವಾಗಿದ್ದಾರೆ.
ಎಎಪಿ ಕಾರ್ಯಕರ್ತರಾದ ಬಿಂದು ರೋಹಿಣಿ ಡಿ ವಾರ್ಡ್ ಸಂಖ್ಯೆ 54 ರಿಂದ ಎಂಸಿಡಿ (ದೆಹಲಿ ಮುನ್ಸಿಪಲ್ ಕಾರ್ಪೊರೇಷನ್) ಚುನಾವಣೆಗೆ ಸ್ಪರ್ಧಿಸಲು ಪ್ರಚಾರ ಮಾಡುತ್ತಿದ್ದಾರೆ. ಈದರೆ ಚುನಾವಣೆಗೆ ಟಿಕೆಟ್ ಪಡೆಯಲು ಪಕ್ಷಕ್ಕೆ ಸುಮಾರು 80 ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಎಎಪಿಯಿಂದ ಟಿಕೆಟ್ ಹಂಚಿಕೆಯನ್ನು ನಿರ್ಧರಿಸುವ ಸಮಿತಿಯ ಕೆಲವು ಸದಸ್ಯರು ಭಾರಿ ಮೊತ್ತವನ್ನು ಪಾವತಿಸುವಂತೆ ಕೇಳಿಕೊಂಡರು ಎಂದು ಎಎಪಿ ಕಾರ್ಯಕರ್ತರು ಹೇಳಿದ್ದಾರೆನ್ನುವ ಕುಟುಕು ಕಾರ್ಯಾಚರಣೆ ಇದಾಗಿದೆ.
ದೆಹಲಿಯಲ್ಲಿ 2022 ರ ಎಂಸಿಡಿ ಚುನಾವಣೆಯು ಡಿಸೆಂಬರ್ 4 ರಂದು ನಡೆಯಲಿದ್ದು, ಫಲಿತಾಂಶವು ಡಿಸೆಂಬರ್ 7 ರಂದು ಪ್ರಕಟವಾಗುವ ಸಾಧ್ಯತೆಯಿದೆ.