ಕಳೆದ ಕೆಲವು ತಿಂಗಳಿನಿಂದ ಶಿವಮೊಗ್ಗದಲ್ಲಿ ಕೋಮು ಗಲಭೆ ಪ್ರಕರಣಗಳು ಮತ್ತೆ ಮತ್ತೆ ನಡೆಯುತ್ತಿವೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಪ್ರಕರಣಗಳ ಕುರಿತಂತೆ ಕಾಂಗ್ರೆಸ್ ಟ್ವೀಟ್ ಮೂಲಕ ಟಾಂಗ್ ನೀಡಿದೆ.
ಗೃಹ ಸಚಿವರ ತವರು ಜಿಲ್ಲೆಯಲ್ಲೇ ನಿರಂತರವಾಗಿ ಗಲಭೆ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕನಿಷ್ಠ ಪ್ರಯತ್ನ ಮಾಡದಿರುವುದು ಸಚಿವರ ಅಸಾಮರ್ಥ್ಯವೋ ಅಥವಾ ಕೋಮು ಕಲಹಕ್ಕೆ ನೀಡುತ್ತಿರುವ ಉದ್ದೇಶಪೂರ್ವಕ ಕುಮ್ಮಕ್ಕೊ? ಎಂದು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಪ್ರಶ್ನಿಸಿದೆ.
ಅಲ್ಲದೇ ಬಿಜೆಪಿ ಶಿವಮೊಗ್ಗದಲ್ಲಿ ಕೋಮು ರಾಜಕೀಯದ ಪ್ರಯೋಗಶಾಲೆಯ ಬ್ರಾಂಚ್ ತೆರೆದಿರುವಂತಿದೆ ಎಂದು ಟ್ವೀಟ್ ಮೂಲಕ ಕುಹಕವಾಡಲಾಗಿದೆ.