ಖಾದಿ ರಾಷ್ಟ್ರಧ್ವಜದ ಬದಲಿಗೆ ಪಾಲಿಸ್ಟರ್ ಬಟ್ಟೆಯ ರಾಷ್ಟ್ರಧ್ವಜವನ್ನೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ವಿಚಾರ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಕೆರಳಿಸಿದೆ.
ಹೀಗಾಗಿ ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಾರುಕಟ್ಟೆಯಲ್ಲಿ ಹರಿದ ಪಾಲಿಸ್ಟರ್ ಧ್ವಜಗಳು ಮಾರಾಟವಾಗುತ್ತಿವೆ. ಇಂತಹ ಧ್ವಜಗಳನ್ನು ಹಾರಿಸಬೇಕಾ ? ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ವಾ ಎಂದು ಪ್ರಶ್ನಿಸಿದರು.
ಈ ಧ್ವಜಗಳಲ್ಲಿ ಅಶೋಕ ಚಕ್ರ ವಕ್ರವಾಗಿದೆ. ಅಲ್ಲದೆ ಮೊಟ್ಟೆಯಾಕಾರದಲ್ಲಿ ಅಶೋಕ ಚಕ್ರ ಹಾಕಲಾಗಿದೆ. ರಾಷ್ಟ್ರಧ್ವಜಕ್ಕೆ ತನ್ನದೇ ಆದ ಘನತೆ ಗೌರವ ಇದ್ದು, ಇದು ಬಿಜೆಪಿಯವರ ಗಮನಕ್ಕೆ ಬಂದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.