ಬೆಂಗಳೂರು: ಸತೀಶ್ ಜಾರಕಿಹೊಳಿಯವರ ಹಿಂದೂ ಪದ ವಿಚಾರ ದೊಡ್ಡ ಚರ್ಚೆಯ ಜೊತೆಗೆ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿತ್ತು. ಈ ವಿಚಾರವಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ಸತೀಶ್ ಹಿಂದೂ ಪದ ನಮ್ಮ ದೇಶದಲ್ಲ. ಅದು ಹೊರಗಿನಿಂದ ಬಂದಿರುವುದು ಅಂದಿದ್ದಾರೆ. ಚರ್ಚೆಗೆ ನಾನು ರೆಡಿ ಎಂದಿದ್ದಾರೆ. ನಾನು ಪುಸ್ತಕ ರೆಫರ್ ಮಾಡಿ ಹೇಳಿದ್ದೇನೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಹಾಗಾದ್ರೆ ಬಿಜೆಪಿಯವರು ಚರ್ಚೆಗೆ ಯಾಕೆ ಸಿದ್ಧರಿಲ್ಲ ಎಂದು ಪ್ರಶ್ನೆ ಮಾಡಿದರು.
ರಮೇಶ್ ಕತ್ತಿ ಇದೇ ಹೇಳಿಕೆ ಕೊಟ್ಟಿದ್ರು. ಅವರು ಯಾವ ಪಕ್ಷದವರು. ವೇದಿಕೆ ಕಲ್ಪಿಸಿಕೊಡಲು ಸತೀಶ್ ರೆಡಿಯಿದ್ದಾರೆ. ಇವರು ಯಾಕೆ ರೆಡಿ ಇಲ್ಲ. ಮೂಢನಂಬಿಕೆಯಿಂದ ದೂರ ಉಳಿದವರು. ಸ್ಮಶಾನದಲ್ಲಿ ಮಲಗಿದಾಗ ಜೈಕಾರ ಹಾಕ್ತೀರ. ಅವರು ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ. ಇವರು ಚರ್ಚೆ ಮಾಡಲಿ. ಬಿಜೆಪಿಯವರು ಮನುಸ್ಮೃತಿ ಮೇಲೆ ನಂಬಿಕೆ ಇರುವವರು. ಬೇರೆಯವರು ಮಾಡಿದ್ದರೆ ಈ ರೀತಿ ಮಾಡ್ತಿರಲಿಲ್ಲ. ಅವರ ನೀತಿಗಳಲ್ಲಿ ಮನುಸ್ಮೃತಿ ಎದ್ದು ಕಾಣ್ತಿದೆ. ಸ್ಪೀಕರ್ ಆರ್ ಎಸ್ ಎಸ್ ನವರು ಅಂತ ಹೇಳಿಕೊಳ್ತಾರೆ. ಸದನದೊಳಗೆ ಕುಳಿತು ಹೇಳ್ತಾರಲ್ಲ. ಇಂತಹ ವ್ಯವಸ್ಥೆ ಎಲ್ಲಾದ್ರೂ ನೋಡಿದ್ದೇವಾ ಎಂದರು.
ಅವರು ಚರ್ಚೆಗೆ ಆಹ್ವಾನ ಮಾಡಿದ್ದಾರೆ, ಸವಾಲ್ ಹಾಕಿದ್ದಾರೆ. ಇವರು ಸವಾಲನ್ನ ಸ್ವೀಕಾರ ಮಾಡಲಿ. ಚರ್ಚೆಗೆ ಹೋಗಲಿ ಸತೀಶ್ ರೆಡಿ ಇದ್ದಾರೆ. ಅವರು ವೈಯುಕ್ತಿಕವಾಗಿ ಹೇಳಿದ್ದಾರೆ ಇವರು ತಮ್ಮ ಹುಳುಕು ಮುಚ್ಚಲು ಇದನ್ನ ಮುಂದೆ ತಂದಿದ್ದಾರೆ. ಚರ್ಚೆಗೆ ಯಾಕೆ ಬಿಜೆಪಿಯವರು ಸಿದ್ಧರಿಲ್ಲ. ಇನ್ನು ಚಿತ್ತಾಪುರದಲ್ಲಿ ಪ್ರಿಯಾಂಕ್ ಕಳೆದುಹೋದ್ರು ಎಂಬ ಪೋಸ್ಟರ್ ವಿಚಾರವಾಗಿ ಮಾತನಾಡಿದ ಅವರು, ಇದು ಯಾರು ಅಂಟಿಸಿದ್ದು ಬಿಜೆಪಿಯವರು. ನಾನು ಬಿಜೆಪಿಯವರಿಗೆ ಉತ್ತರ ಕೊಡಬೇಕಿಲ್ಲ. ನಾನು ಉತ್ತರ ಕೊಡಬೇಕಿರುವ ಕ್ಷೇತ್ರದ ಜನರಿಗೆ ಎಂದು ತಿರುಗೇಟು ಕೊಟ್ಟರು.