ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ಫಲಿತಾಂಶದಲ್ಲಿ ಚುನಾಯಿತ ಜನಪ್ರತಿನಿಧಿಗಳ ತೀರ್ಪು ಕಾಂಗ್ರೆಸ್ ಪರ ಇದೆ ಎಂಬುದು ಗೊತ್ತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂಬುದು ಇದರಿಂದಲೇ ಸಾಬೀತಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 12 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಗಾಯತ್ರಿ 6 ಮತಗಳ ಅಂತರದಿಂದ ಸೋತರು. ಅಲ್ಲಿ ಹತ್ತು ಮಂದಿ ನಾಮಿನೇಟೆಡ್ ಮೆಂಬರ್ ಇದ್ದರೂ ವೋಟ್ ಹಾಕಿಲ್ಲ. ಉಳಿದೆಡೆ ನಾವು ಉತ್ತಮ ಫೈಟ್ ಮಾಡಿದ್ದೇವೆ. ಈ ಚುನಾವಣೆ ಜನಾಭಿಪ್ರಾಯವಲ್ಲದಿದ್ದರೂ ಜನಪ್ರತಿನಿಧಿಗಳ ತೀರ್ಪು ನಮ್ಮ ಪರ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂಬುದು ಗೊತ್ತಾಗುತ್ತಿದೆ ಎಂದರು.
ಇಂಥವರೂ ಇರ್ತಾರೆ..! ಬೆಚ್ಚಿಬೀಳಿಸುವಂತಿದೆ ಮಾಜಿ ಗೆಳತಿ ಸ್ಮಾರ್ಟ್‌ಫೋನ್ ಎಗರಿಸಿದವನು ಮಾಡಿದ ಕೆಲಸ
ಒಟ್ಟಾರೆ ಧ್ರುವಿಕರಣ ಆರಂಭವಾಗಿದೆ. ಬೆಳಗಾವಿಯಲ್ಲಿ ಬಿಜೆಪಿ ಸೋಲನುಭವಿಸಿದೆ. ಇದು ಬಿಜೆಪಿಗೆ ಧಮ್ಮಿಲ್ಲ ಎಂಬುದನ್ನು ಸೂಚಿಸುತ್ತೆ ಎಂದು ಹೇಳಿದ್ದಾರೆ.